ವೈರಲ್ ಸುದ್ದಿ; ಪಂಪಾನದಿ ದಡದಲ್ಲಿ ರಕ್ಷಣೆಗಾಗಿ ಕಾದು ನಿಂತಿದ್ದ ಜನರನ್ನು ರಕ್ಷಿಸಿದನೇ ಅಯ್ಯಪ್ಪ ಸ್ವಾಮಿ?

ಮಹಾ ಜಲಪ್ರಳಯದಿಂದಾಗಿ ಕೇರಳ ಅಕ್ಷರಶಃ ನಲುಗಿದ್ದು ನೂರಾರು ಜನರು ಪ್ರಾಣ ಕಳೆದುಕೊಂಡು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ...
ಪಂಪಾ ನದಿ-ಅಯ್ಯಪ್ಪ ಸ್ವಾಮಿ
ಪಂಪಾ ನದಿ-ಅಯ್ಯಪ್ಪ ಸ್ವಾಮಿ
ತಿರುವನಂತಪುರಂ: ಮಹಾ ಜಲಪ್ರಳಯದಿಂದಾಗಿ ಕೇರಳ ಅಕ್ಷರಶಃ ನಲುಗಿದ್ದು ನೂರಾರು ಜನರು ಪ್ರಾಣ ಕಳೆದುಕೊಂಡು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. 
ಮಹಾ ಮಳೆಯಿಂದಾಗಿ ಕೇರಳ ಸಂಪೂರ್ಣ ಜಲಾವೃತವಾಗಿತ್ತು. ಅಂತೆ ಕಲಿಯುಗ ವರದ ಶ್ರೀ ಶಬರಿಮಲೆ ಧರ್ಮಶಾಸ್ತ ಅಯ್ಯಪ್ಪಸ್ವಾಮಿ ನೆಲೆಸಿರುವ ಶಬರಿಮಲೆ ಸಹ ಪ್ರವಾಹಕ್ಕೆ ತುತ್ತಾಗಿತ್ತು. ಪಂಪಾ ನದಿ ಉಕ್ಕಿಹರಿದಿದ್ದು ದೇವಸ್ತಾನ ಸಹ ಜಲಾವೃತವಾಗಿತ್ತು. 
ಇಂತಹ ಕಠಿಣ ಸಂದರ್ಭದಲ್ಲಿ ಒಂದು ಪವಾಡ ನಡೆದಿದೆ ಎಂಬ ಮಾತುಗಳು ಕೇರಳದಲ್ಲಿ ಕೇಳಿಬರುತ್ತಿದೆ. ಹೌದು ಪಂಪಾ ನದಿ ದಡದಲ್ಲಿ ರಕ್ಷಣೆಗಾಗಿ ಕಾದು ಕುಳಿತ್ತಿದ್ದವರನ್ನು ಅಜ್ಞಾತವ್ಯಕ್ತಿಯೊಬ್ಬರು ದೋಣಿಯಲ್ಲಿ ಬಂದು ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 100ಕ್ಕೂ ಹೆಚ್ಚು ಜನರನ್ನು ವೇಗವಾಗಿ ಹರಿಯುತ್ತಿದ್ದ ನೀರಿನ ನಡುವೆ ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. 
ನಂತರ ಅಜ್ಞಾತವ್ಯಕ್ತಿ ಮತ್ತೆ ನದಿಯಲ್ಲಿ ದೋಣಿಯನ್ನು ಓಡಿಸಿಕೊಂಡು ಹೋಗಿದ್ದು ನದಿ ಮಧ್ಯದಲ್ಲೇ ಅಜ್ಞಾತವ್ಯಕ್ತಿ ಮತ್ತು ದೋಣಿ ಅದೃಷ್ಯವಾಗಿದೆ. ಇದೇ ವೇಳೆ ದೂರದಲ್ಲಿ ಹುಲಿಯೊಂದು ಕಾಣಿಸಿಕೊಂಡಿದೆ ಸ್ವಲ್ಪ ಸಮಯದ ನಂತರ ಹುಲಿಯು ಅದೃಶ್ಯವಾಗಿದ್ದು, ಇದನ್ನು ಕಂಡ ಜನರು ಸ್ವತಃ ಭಗವಂತ ಅಯ್ಯಪ್ಪನೆ ನಮ್ಮನ್ನು ಕಾಪಾಡಿದ್ದಾನೆ ಎಂದು ನಂಬಿದ್ದಾರೆ. 
ಇದು ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ಸುದ್ದಿ ವೈರಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com