ರಾಹುಲ್ ಗಾಂಧಿ
ದೇಶ
ಸುಷ್ಮಾ ಸ್ವರಾಜ್ ಗೆ ಮಾಡಲು ಕೆಲಸವಿಲ್ಲ, ಹೀಗಾಗಿ ಜನರ ವೀಸಾ ಮೇಲೆ ಕಾಲ ಕಳೆಯುತ್ತಾರೆ: ರಾಹುಲ್ ಗಾಂಧಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ನಂತರ ರಾಹುಲ್ ಗಾಂಧಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಟೀಕಿಸಿದ್ದಾರೆ...
ಲಂಡನ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ನಂತರ ರಾಹುಲ್ ಗಾಂಧಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಟೀಕಿಸಿದ್ದಾರೆ.
ಸುಷ್ಮಾ ಸ್ವರಾಜ್ ಗೆ ಮಾಡಲು ಕೆಲಸವಿಲ್ಲ, ಹೀಗಾಗಿ ಜನರ ವೀಸಾ ಮೇಲೆ ಕಾಲ ಕಳೆಯುತ್ತಾರೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
ಲಂಡನ್ ನಲ್ಲಿ ಮಾತನಾಡಿರುವ ಅವರು, ಸುಷ್ಮಾ ಸ್ವರಾಜ್ ಹೆಚ್ಚಿನ ಸಮಯ ವೀಸಾ ಕೆಲಸಗಳ ಮೇಲೆ ಕೆಲಸ ಮಾಡುತ್ತಾರೆ ಎಂದು ಹಲವು ಮಂದಿ ಹೇಳುವುದನ್ನು ನೀವು ಗಮಿನಿಸಿರಬಹುದು. ಆ ಮಾತಿನ ಹಿಂದಿನ ಅರ್ಥ ಏನು ಎಂಬ ಬಗ್ಗೆ ನಿಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿರುವ ರಾಹುಲ್ ಗಾಂಧಿ, ವೀಸಾ ಬಿಟ್ಟರೆ ಸುಷ್ಮಾ ಅವರಿಗೆ ಮಾಡಲು ಬೇರೆ ಯಾವುದೇ ಕೆಲಸವಿಲ್ಲ ಎಂದು ರಾಹುಲ್ ಛೇಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ