ರಕ್ಷಾಬಂಧನದ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಕ್ಷಾಬಂಧನದ ...
ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್
ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್
Updated on

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಕ್ಷಾಬಂಧನದ ಅಂಗವಾಗಿ ದೇಶದ ಜನತೆಗೆ ಶುಭ ಕೋರಿದ್ದಾರೆ.

ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ, ಜನರಲ್ಲಿ ಸಹೋದರ ಭಾತೃತ್ವ ಬೆಳೆಸುವ ರಕ್ಷಾಬಂಧನ ಜನರಲ್ಲಿ ಪ್ರೀತಿ, ಸೌಹಾರ್ತೆಯನ್ನು ಮೂಡಿಸಲಿ ಎಂದಿದ್ದಾರೆ.

ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ, ರಕ್ಷಾ ಬಂಧನದ ಶುಭಾಶಯ ಕೋರಿದ್ದಾರೆ.

ಸಹೋದರ, ಸಹೋದರಿಯರ ಹಬ್ಬ ರಕ್ಷಾ ಬಂಧನವಾಗಿದ್ದು, ಪ್ರೀತಿ, ರಕ್ಷಣೆ ಸಂಕೇತವಾಗಿ ಸಹೋದರಿ ಸಹೋದರನಿಗೆ ರಕ್ಷೆ ಕಟ್ಟುತ್ತಾಳೆ, ಅದಕ್ಕೆ ಪ್ರತಿಯಾಗಿ ಅಣ್ಣ ಏನಾದರೂ ಉಡುಗೊರೆ ನೀಡುವ ಸಂಪ್ರದಾಯ ಭಾರತದಲ್ಲಿ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com