ಶ್ರೀನಗರ ಹೋಟೆಲ್ ಕೇಸ್: ಮೇಜರ್ ಲೀಟುಲ್ ಗೊಗೋಯ್ ದೋಷಿ, ಶಿಸ್ತು ಕ್ರಮಕ್ಕೆ ಸೇನೆ ಮುಂದು

ಶ್ರೀನಗರ ಹೋಟೆಲ್ ಕೇಸ್ ಸಂಬಂಧ ಮೇಜರ್ ಲೀಟುಲ್ ಗೊಗೋಯ್ ದೋಷಿ ಎಂದು ರುಜುವಾತದ ಹಿನ್ನೆಲೆಯಲ್ಲಿ ಅವರನ್ನು ಸೇನಾ ಕೋರ್ಟ್ ಬಂಧಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೇಜರ್ ಲೀಟುಲ್ ಗೊಗೋಯ್
ಮೇಜರ್ ಲೀಟುಲ್ ಗೊಗೋಯ್
ನವದೆಹಲಿ: ಶ್ರೀನಗರ ಹೋಟೆಲ್ ಕೇಸ್ ಸಂಬಂಧ ಮೇಜರ್ ಲೀಟುಲ್ ಗೊಗೋಯ್ ದೋಷಿ ಎಂದು  ರುಜುವಾತದ ಹಿನ್ನೆಲೆಯಲ್ಲಿ ಅವರನ್ನು ಸೇನಾ ಕೋರ್ಟ್ ಬಂಧಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜೊತೆಗೆ ಅವರ ವಿರುದ್ಧ ಶಿಸ್ತು ಕ್ರಮಕ್ಕು ಮುಂದಾಗಿದೆ, ಮಾರ್ಚ್ 23 ರಂದು ಶ್ರೀನಗರ ಹೋಟೆಲ್ ಒಂದರಲ್ಲಿ ಲೀಟುಲ್ ಗೊಗೋಯ್ ಮಹಿಳೆಯ ಜೊತೆ ಕಾಣಿಸಿಕೊಂಜ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. 
ಗಗೋಯ್ ಅವರು ಸೇನಾ ನಿಯಮಗಳನ್ನು ಉಲ್ಲಂಘಿಸಿರುವುದು ಕೋರ್ಟ್ ಗೆ ತಿಳಿಯಿತು. ಸಂಘರ್ಷ ವಲಯದಲ್ಲಿ ಸ್ಥಳೀಯ ಮಹಿಳೆಯೊಂದಿಗೆ ಮೇಜರ್ ಸಂಪರ್ಕ ಬೆಳೆಸುತ್ತಿದ್ದುದ್ದು ಸೇನಾ ನೀತಿ ನಿಯಮಗಳಿಗೆ ವಿರುದ್ಧವಾದದ್ದಾಗಿದೆ ಎಂದು ಹೇಳಿದೆ.ಹಾಗೂ ಕರ್ತವ್ಯ ನಿರತ ಪ್ರದೇಶದಿಂದ ದೂರ ತೆರಳಿದ್ದು  ತಪ್ಪು ಎಂದು ಸೇನಾ ನ್ಯಾಯಾಲಯ ಹೇಳಿದೆ.
18 ವರ್ಷದ ಮಹಿಳೆ ಜೊತೆ ಮೇಜರ್  ಹೋಟೆಲ್ ಪ್ರವೇಶಿಸಲು ಯತ್ನಿಸಿದ್ದರು, 
ಕಳೆದ ವರ್ಷ ಏಪ್ರಿಲ್‌ ತಿಂಗಳಲ್ಲಿ ಕಾಶ್ಮೀರಿ ವ್ಯಕ್ತಿಯೊಬ್ಬನನ್ನು ಮಾನವ ಗುರಾಣಿಯನ್ನಾಗಿ ಬಳಸಿಕೊಂಡು,ಲೀಟುಲ್ ಗೊಗೋಯ್  ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com