ಮೇಘಾಲಯ ಉಪಚುನಾವಣೆ: ಮತ ಎಣಿಕೆ ಆರಂಭ, ದಕ್ಷಿಣ ತುರಾದಲ್ಲಿ ಮುಖ್ಯಮಂತ್ರಿ ಕನ್ರಾಡ್ ಕೆ. ಸಂಗ್ಮಾ ಮುನ್ನಡೆ

ಮೇಘಾಲಯ ರಾಜ್ಯದ ದಕ್ಷಿಣ ತುರಾ ಮತ್ತು ರಾಣಿಕೊರ್ ವಿಧಾನಸಭೆಯ ಉಪ ಚುನಾವಣೆಯ ಮತಎಣಿಕೆ ಕಾರ್ಯ ಬಿಗಿ ಭದ್ರತೆ ನಡುವೆ ಆರಂಭವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಫ್ ಆರ್ ಖಾರ್ಕೊಂಗೋರ್ ಹೇಳಿದ್ದಾರೆ.
ಕನ್ರಾಡ್ ಕೆ. ಸಂಗ್ಮಾ
ಕನ್ರಾಡ್ ಕೆ. ಸಂಗ್ಮಾ

ಶಿಲ್ಲಾಂಗ್ : ಮೇಘಾಲಯ ರಾಜ್ಯದ ದಕ್ಷಿಣ ತುರಾ ಮತ್ತು ರಾಣಿಕೊರ್  ವಿಧಾನಸಭೆಯ ಉಪ ಚುನಾವಣೆಯ ಮತಎಣಿಕೆ ಕಾರ್ಯ ಬಿಗಿ ಭದ್ರತೆ ನಡುವೆ ಆರಂಭವಾಗಿದೆ ಎಂದು  ಮುಖ್ಯ ಚುನಾವಣಾಧಿಕಾರಿ  ಎಫ್ ಆರ್  ಖಾರ್ಕೊಂಗೋರ್ ಹೇಳಿದ್ದಾರೆ.

ದಕ್ಷಿಣ ತುರಾದಲ್ಲಿ ಆಡಳಿತ ರೂಢ ಎನ್ ಪಿಪಿ ಪಕ್ಷದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕನ್ರಾಡ್ ಕೆ. ಸಂಗ್ಮಾ  ಸ್ಪರ್ಧಿಸಿದ್ದಾರೆ.

ಮಾಜಿ ಕಾಂಗ್ರೆಸ್ ಶಾಸಕ  ಮಾರ್ಟಿನ್ ಎಮ್ ಡಾಂಗ್ಗೊ  ರಾಣಿಕೋರ್  ವಿಧಾನಸಭಾ ಕ್ಷೇತ್ರದಿಂದ ರಾಜೀನಾಮೆ ನೀಡಿದ್ದು, ಎನ್ ಪಿಪಿ ಅಭ್ಯರ್ಥಿಯಾಗಿದ್ದಾರೆ.

ಮೊದಲ ಸುತ್ತಿನ ಫಲಿತಾಂಶದ ಬಳಿಕ ಕನ್ರಾಡ್ ಕೆ. ಸಂಗ್ಮಾ   ತಮ್ಮ ಸಮೀಪದ ಕಾಂಗ್ರೆಸ್ ಅಭ್ಯರ್ಥಿ ಚಾರ್ಲೊಟ್  ಡಬ್ಯ್ಲೂ ಮೊಮಿನ್ ಗಿಂತ 5800 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ರಾಣಿಕೋರ್ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಪಿ ಪಕ್ಷದ ಅಭ್ಯರ್ಥಿ ಪಿ ಮಾರ್ವೀನ್  ತಮ್ಮ ಸಮೀಪದ ಎನ್ ಪಿಪಿ ಅಭ್ಯರ್ಥಿ ಡ್ಯಾಂಗ್ಗೊ ಗಿಂತ 1 ಸಾವಿರ ಮತಗಳಿಂದ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಈ ಎರಡು ಕ್ಷೇತ್ರಗಳಿಗೆ ಆಗಸ್ಟ್ 23 ರಂದು ಉಪಚುನಾವಣೆ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com