ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮ: ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ದೋಷಿ

ಪಂಜಾಬ್ ನ ಫರೀದ್ ಕೋಟ್ ಜಿಲ್ಲೆಯ ಕೋಟ್ಕಾಪುರದಲ್ಲಿ ಸಿಖ್ ಸಮುದಾಯ ಮತ್ತು ಪೊಲೀಸರ ನಡುವಿನ ಗಲಭೆಗೆ ...
ಪ್ರಕಾಶ್ ಸಿಂಗ್ ಬಾದಲ್
ಪ್ರಕಾಶ್ ಸಿಂಗ್ ಬಾದಲ್
ಚಂಡೀಗಢ: ಪಂಜಾಬ್ ನ ಫರೀದ್ ಕೋಟ್ ಜಿಲ್ಲೆಯ ಕೋಟ್ಕಾಪುರದಲ್ಲಿ  ಸಿಖ್ ಸಮುದಾಯ ಮತ್ತು ಪೊಲೀಸರ ನಡುವಿನ ಗಲಭೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ರಂಜಿತ್ ಸಿಂಗ್ ಆಯೋಗ ನೀಡಿದ ವರದಿಯನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ಪೊಲೀಸ್ ಕ್ರಮ ತೆಗೆದುಕೊಂಡ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ವಿರುದ್ಧ ದೋಷಾರೋಪಣೆ ಮಾಡಲಾಗಿದೆ.
ಆಗಸ್ಟ್ 16ರಂದು ಐದು ಪುಟಗಳ ಪೂರಕ ವರದಿಯನ್ನು ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಮುಂಚೆ ನೀಡಿದ್ದ ವರದಿಯಲ್ಲಿ ಗಲಭೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಯ ಕೈವಾಡ ಇದೆ ಎಂದು ಹೇಳಿತ್ತು. ಆದರೆ ಈಗ ನೇರವಾಗಿ ಅಂದಿನ ಮುಖ್ಯಮಂತ್ರಿ(ಪ್ರಕಾಶ್ ಸಿಂಗ್ ಬಾದಲ್)ಗಳ ಪಾತ್ರ ಇದೆ ಎಂದು ಹೇಳಿದೆ.
ಅಂದಿನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಡಿಜಿಪಿ ಮತ್ತು ಜಿಲ್ಲಾ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಅಲ್ಲದೆ ಸಿಎಂ ಆದೇಶದಂತೆ ಅಂತಿಮವಾಗಿ ಪೊಲೀಸರು ಕೋಟ್ಕಾಪುರದಲ್ಲಿ ಕ್ರಮ ತೆಗೆದುಕೊಂಡಿದ್ದಾರೆ ಎಂದು ವರದಿ ವಿವರಿಸಿದೆ.
2015ರಲ್ಲಿ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ್ ಸಾಹಿಬ್ ನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿ ಸಿಖ್ ಸಮುದಾಯದವರು ಕೋಟ್ಕಾಪುರದಲ್ಲಿ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಪ್ರತಿಭಟನಾಕರರನ್ನು ಬಂಧಿಸಲು ಯತ್ನಿಸಿದಾಗ ನಡೆದ ಹಿಂಸಾಚಾರದಲ್ಲಿ 13 ಮಂದಿ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com