ಭಾರತದಲ್ಲಿ ವಾಟ್ಸ್ ಅಪ್ ಪಾವತಿ ಸೇವೆ: ಕೇಂದ್ರ ಸರ್ಕಾರ, ಮೆಸೇಜಿಂಗ್ ಸಂಸ್ಥೆಗೆ ಸುಪ್ರೀಂ ನೋಟೀಸ್

ವಾಟ್ಸ್ ಅಪ್ ಮೆಸೇಜಿಂಗ್ ಸೇವಾ ಸಂಸ್ಥೆಯು ಭಾರತದಲ್ಲಿ ಪ್ರಾರಂಭಿಸಿದ ಪೇಮೆಂಟ್ ಸಿಸ್ಟಮ್ ಆರ್ ಬಿಐ ನ ನಿಬಂಧನೆಗಳನ್ನು ಪೂರ್ಣವಾಗಿ ಅನುಸರಿಸದಿದ್ದಲ್ಲಿ......
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಾಟ್ಸ್ ಅಪ್ ಮೆಸೇಜಿಂಗ್ ಸೇವಾ ಸಂಸ್ಥೆಯು ಭಾರತದಲ್ಲಿ ಪ್ರಾರಂಭಿಸಿದ ಪೇಮೆಂಟ್ ಸಿಸ್ಟಮ್ (ಪಾವತಿ ಸೇವೆ) ಆರ್ ಬಿಐ ನ ನಿಬಂಧನೆಗಳನ್ನು ಪೂರ್ಣವಾಗಿ ಅನುಸರಿಸದಿದ್ದಲ್ಲಿ ಈ ಸೇವೆಯನ್ನು ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿರುವ ಸರ್ವೋಚ್ಚ ನ್ಯಾಯಾಲಯ ವಾಟ್ಸ್ ಅಪ್ ಸಂಸ್ಥೆ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ರೊಹಿಂಟನ್ ಫಾಲಿ ನಾರ್ಕ್ಮನ್ ಮತ್ತು ನ್ಯಾಯಮೂರ್ತಿ ಇಂಡು ಮಲ್ಹೋತ್ರಾ ಅವರನ್ನೊಳಗೊಂಡ ಪೀಠವು ನಾಲ್ಕು ವಾರಗಳಲ್ಲಿ ವಾಟ್ಸ್ ಅಪ್ ಹಾಗೂ ಕಾನೂನು ಸಚಿವಾಲಯ,  ಹಣಕಾಸು ಸಚಿವಾಲಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಕುರಿತು ಪ್ರತಿಕ್ರಿಯೆ ನಿಡಬೇಕು ಎಮ್ದು ನಿರ್ದೇಶಿಸಿದೆ.
ಮೆಸೇಜಿಂಗ್ ಸಂಸ್ಥೆಯು  ರಿಸರ್ವ್ ಬ್ಯಾಂಕ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಅನುಸರಿಸಿಲ್ಲ. ಭಾರತದಲ್ಲಿ  ವಾಟ್ಸ್ ಅಪ್ ದೂರು ನಿರ್ವಹಣಾ ಅಧಿಕಾರಿಯನ್ನು ನೇಮಿಸಿಲ್ಲ ಹೀಗಾಗಿ ಸಂಸ್ಥೆಗೆ ಹಣಕಾಸು ನಿರ್ವಹಣಾ ಸೇವೆ ಮುಂದುವರಿಸಲು ಅವಕಾಶ ನಿಡಬರದೆಂದು ಅರ್ಜಿದಾರ ಪರ ವಕೀಲ ವಿರಾಗ್ ಗುಪ್ತಾ ವಾದಿಸಿದ್ದಾರೆ.
ಫೇಸ್ ಬುಕ್ ಹಾಗೂ ಗೂಗಲ್ ನಂತಹಾ ಸಂಸ್ಥೆಗಳು ಭಾರತದಲ್ಲಿ ಬಳಕೆದಾರರ ದೂರುಗಳನ್ನಾಲಿಸಲು ಅಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ ವಾಟ್ಸ್ ಅಪ್ ಇದುವರೆಗೆ ಇಂತಹಾ ಅಧಿಕಾರಿಗಳನ್ನು ನೇಮಿಸಿಲ್ಲ. ವಾಟ್ಸ್ ಅಪ್ ಜವಾಬ್ದಾರಿಯುತವಾಗಿ ಸೇವೆ ಮುಂದುವರಿಸಲು ಭಾರತೀಯ ಕಾನೂನಿನ ಅನುಸರಣೆಗೆ ನಿರ್ದೇಶನ ನೀಡಬೇಕು ಮತ್ತು ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸುವ ದೂರುದಾರ ಅಧಿಕಾರಿ ನೇಮಕಕ್ಕೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ವಾಟ್ಸ್ ಅಪ್ ಭಾರತದಲ್ಲಿ ಯಾವುದೇ ಕಛೇರಿ ಅಥವಾ ಸರ್ವರ್ ಹೊಂದಿಲ್ಲದ ವಿವಿದೇಶೀ ಸಂಸ್ಥೆಯಾಗಿದೆ. ಆದರೆ ವಾಟ್ಸ್ ಅಪ್ ಭಾರತದಲ್ಲಿ ಸುಮಾರು 200 ದಶಲಕ್ಷ ಬಳಕೆದಾರರನ್ನು ಹೊಂದಿದೆ ಮತ್ತು ಸುಮಾರು ಒಂದು ದಶಲಕ್ಷ ಜನರು ಭಾರತದಲ್ಲಿ ವಾಟ್ಸ್ ಅಪ್ ಪಾವತಿ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.ಇದು ಫೇಸ್ ಬುಕ್ ಮಾಲಿಕತ್ವದ ಸಂಸ್ಥೆಯ ಬಹುದೊಡ್ಡ ಆದಾಯ ಮೂಲವಾಗಿದೆ.
ವಾಟ್ಸ್ ಅಪ್ ಜಾಗತಿಕವಾಗಿ 1.5 ಶತಕೋಟಿಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ.ಪ್ರತಿ ಬಳಕೆದಾರರು ವಾಟ್ಸ್ ಅಪ್ ನಲ್ಲಿ ಬಳಕೆದಾರ ಸಂಖ್ಯೆಯನ್ನು ಹೊಂದ್ದ್ದಾರೆ.ಆದರೆ ಮೆಸೇಜಿಂಗ್ ಸಂಸ್ಥೆಯು ದೂರುಗಳ ದಾಖಲಾತಿಗಾಗಿ ಯಾವುದೇ ನಿರ್ದಿಷ್ಟ ಸಂಸ್ಖ್ಯೆಯನ್ನು (ಹೆಲ್ಪ್ಲೈನ್) ಹೊಂದಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
ಕಳೆದ ವಾರ ವಾಟ್ಸ್ ಅಪ್ ನ  ಸಿಇಓ ಕ್ರಿಸ್ ಡೇನಿಯಲ್ಸ್ ಭಾರತಕ್ಕೆ ಆಗಮಿಸಿದ್ದು  ಐಟಿ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್‌ ಅವರನ್ನು ಭೇಟಿಯಾಗಿದ್ದರು. ಆಗ ಸಚಿವರು  ಸುಳ್ಳು ಸಂದೇಶ ಕುರಿತ ದೂರುಗಳ ಸ್ವೀಕೃತಿಗಾಗಿ ದೇಶದಲ್ಲೇ ಓರ್ವ ಅಧಿಕಾರಿಯನ್ನು ತಕ್ಷಣ ನೇಮಕ ಮಾಡಬೇಕೆಂದು ಸೂಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com