ಸಮಾಜವಾದಿ ಪಕ್ಷ ಅಲ್ಲ ಅದು 'ನಮಾಜ್ ವಾದಿ': ಅಮರ್ ಸಿಂಗ್ ಲೇವಡಿ

: 2013 ರಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಗಲಭೆಗೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರೇ ಹೊಣೆ ಎಂದು ರಾಜ್ಯಸಭೆ ಸಂಸದ ...
ಅಮರ್ ಸಿಂಗ್
ಅಮರ್ ಸಿಂಗ್
ಲಕ್ನೋ: 2013 ರಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಗಲಭೆಗೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರೇ ಹೊಣೆ ಎಂದು ರಾಜ್ಯಸಭೆ ಸಂಸದ ಅಮರ್ ಸಿಂಗ್ ಆರೋಪಿಸಿದ್ದಾರೆ.
2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ತಾವು ಬಿಜೆಪಿಗೆ ಬೆಂಬಲ ನೀಡುವುದಾಗಿ ಅಮರ್ ಸಿಂಗ್ ಘೋಷಿಸಿದ್ದಾರೆ. 
ಮುಲಾಯಂ ಸಿಂಗ್ ಯಾದವ್ ಅವರಂತ ರಾಜಕಾರಣಿಗಳು ಅಜಂ ಖಾನ್ ಅವರಂತ ನಾಯಕರನ್ನು ರೂಪಿಸುತ್ತಾರೆ. ಈ ಕಾರಣದಿಂದ  2013 ರಲ್ಲಿ ನಡೆದಂತ ಘಟನೆಗಳು ನಡೆಯುತ್ತವೆ ಎಂದು ಟೀಕಿಸಿದ್ದಾರೆ.
ಮುಜಾಫರ್ ನಗರ ಗಲಭೆ ಉತ್ತುಂಗದಲ್ಲಿ ದ್ದಾಗ, ಸಮಾಜವಾದಿ ಪಕ್ಷ ಸಾಯ್ ಪೈ ಮಹೋತ್ಸವ ಎಂಜಾಯ್ ಮಾಡುತ್ತಿದ್ದರು ಎಂದು ದೂರಿದ್ದಾರೆ.
ಅಮರ್ ಸಿಂಗ್ ಅವರನ್ನು ಸಾರ್ವಜನಿಕವಾಗಿ ಹತ್ಯೆ ಮಾಡಬೇಕು ಹಾಗೂ ಅವರ ಹೆಂಡತಿ ಮತ್ತು ಮಗಳಿಗೆ ಆ್ಯಿಸಿಡ್ ಹಾಕಬೇಕು ಎಂದು  ಸಂದರ್ಶನವೊಂದರಲ್ಲಿ ಅಜಂಖಾನ್ ಬೆದರಿಕೆ ಹಾಕಿದ್ದರು. ಹೀಗಾಗಿ  ನನ್ನ ಮಗಳು ಶಾಲೆಗೆ ಹೋಗಲು ಹೆದರುತ್ತಿದ್ದಾಳೆ ಎಂದು  ಸುದ್ದಿಗೋಷ್ಠಿಯಲ್ಲಿ ಅಮರ್ ಸಿಂಗ್ ಹೇಳಿದ್ದಾರೆ.
ಸಮಾಜವಾದಿ  ಪಕ್ಷ ನಮಾಜ್ ವಾದಿಯಾಗುತ್ತಿದೆ ಎಂದು ಅಮರ್ ಸಿಂಗ್  ಲೇವಡಿ ಮಾಡಿದ್ದಾರೆ. ಗುಜರಾತ್ ನಲ್ಲ ನಡೆದರೇ ಅದು ಗಲಭೆಯಾಗುತ್ತದೆ ಎಂದಾದರೇ ಉತ್ತರ ಪ್ರದೇಶದಲ್ಲಿ ನಡೆದದ್ದು ಗಲಭೆಯಲ್ಲವೇ ಎಂದು ಪ್ರಶ್ನಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com