ಅಗತ್ಯವಿದ್ದರೆ ಸನಾತನ ಸಂಸ್ಥೆಗೆ ನಿಷೇಧ ಹೇರಿ: ರಾಮ್ ದಾಸ್ ಅಠಾವಳೆ

ಒಂದು ವೇಳೆ ಅಗತ್ಯವಿದ್ದರೆ ಹಿಂದೂ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯನ್ನು ಶಾಶ್ವತವಾಗಿ ನಿಷೇಧಿಸಲಾಗುವುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಬಲವರ್ದನೆ ಖಾತೆ ರಾಜ್ಯ ಸಚಿವ ರಾಮ್ ದಾಸ್ ಅಠಾವಳೆ ತಿಳಿಸಿದ್ದಾರೆ.
ರಾಮ್ ದಾಸ್ ಅಠಾವಳೆ
ರಾಮ್ ದಾಸ್ ಅಠಾವಳೆ
Updated on

ಮುಂಬೈ: ಒಂದು ವೇಳೆ ಅಗತ್ಯವಿದ್ದರೆ  ಹಿಂದೂ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯನ್ನು ಶಾಶ್ವತವಾಗಿ ನಿಷೇಧಿಸಲಾಗುವುದು ಎಂದು  ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಬಲವರ್ದನೆ ಖಾತೆ ರಾಜ್ಯ ಸಚಿವ ರಾಮ್ ದಾಸ್ ಅಠಾವಳೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಸಂಸ್ಥೆ ತನ್ನ ಹಿಂಸಾತ್ಮಕ ಚಟುವಟಿಕೆಗಳನ್ನು ನಿಲ್ಲಿಸಬೇಕು. ಒಂದು ವೇಳೆ ಅದು ಪ್ರಗತಿಪರ ಚಿಂತಕರಾದ ಡಾ. ನರೇಂದ್ರ ದಾಬೊಲ್ಕರ್ ಮತ್ತು ಪತ್ರಕರ್ತೆ  ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತೊಡಗಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ದುಷ್ಕರ್ಮಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು, ಅಗತ್ಯವಾದಲ್ಲಿ ಸಂಘಟನೆಯನ್ನು ಶಾಶ್ವತವಾಗಿ ನಿಷೇಧಿಸಲಾಗುವುದು ಎಂದು ತಿಳಿಸಿದರು.

ಸನಾತನ ಸಂಸ್ಥೆ ನರೇಂದ್ರ ದಾಬೊಲ್ಕರ್ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತೊಡಗಿಸಿಕೊಂಡಿಲ್ಲ ಎಂಬ ಆರೋಪವನ್ನು ಸನಾತನ ಸಂಸ್ಥೆ ನಿರಾಕರಿಸಿದ  ನಂತರ ರಾಮ್ ದಾಸ್ ಅಠಾವಳೆ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಬಂಧಿಸಲ್ಪಟ್ಟ ಒಂಬತ್ತು ಜನರು   ಸನಾತನ ಸಂಸ್ಥೆಗೆ ಸೇರಿದವರಲ್ಲ. ಈ ಪ್ರಕರಣದಲ್ಲಿ  ಅನಗತ್ಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ .ಒಂಬತ್ತು ಜನರಲ್ಲಿ, ಐದು ಜನರು,  ಹೆಸರುಗಳು ನಾವು ಮಾಧ್ಯಮಗಳ ಮೂಲಕ ಮಾತ್ರ ತಿಳಿದುಕೊಂಡಿವೆ ಎಂದು  ಸನಾತನ ಸಂಸ್ಥೆ ವಕ್ತಾರ  ಚೇತನ್ ರಾಜಹನ್ಸ್ ಹೇಳಿದ್ದಾರೆ.

 ಬಂಧಿತರು ನಮ್ಮೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಎಟಿಸ್ ಹೇಳಿದ್ದಾರೆ. ಇಂತಹ ವದಂತಿ ತಡೆಗಟ್ಟಲು ನ್ಯಾಯಾಲಯದ ಮೆಟ್ಟಿಲು ಹತ್ತಲು ನಿರ್ಧರಿಸಿದ್ದೇವೆ. ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಸನಾತನ ಸಂಸ್ಥೆ ಮೇಲೆ ಟಾರ್ಗೆಟ್ ಮಾಡದಂತೆ ಪ್ರತಿಯೊಬ್ಬರಲ್ಲೂ ಮನವಿ ಮಾಡಿಕೊಳ್ಳುವುದಾಗಿ  ಅವರು ಹೇಳಿದ್ದಾರೆ.

ನರೇಂದ್ರ ದಾಬೊಲ್ಕರ್ ಹತ್ಯೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಪತ್ರಕರ್ತೆ , ಸಾಮಾಜಿಕ ಹೋರಾಟಗಾರ್ತಿ  ಗೌರಿ ಲಂಕೇಶ್  ಹತ್ಯೆಗೆ ಬಳಸಿದ ಪಿಸ್ತೂಲ್ ನ್ನು ಸಿಬಿಐ ವಶಪಡಿಸಿಕೊಂಡಿತ್ತು. ಹೀಗೆ ಈ ಎರಡು ಹತ್ಯೆ ಪ್ರಕರಣದ ನಡುವೆ ಸಾಮ್ಯತೆ ಕಂಡುಬಂದಿತ್ತು.

ದಾಬೊಲ್ಕರ್   ಹತ್ಯೆ ಪ್ರಕರಣದ ಆರೋಪಿ ಶುಭಂ ಸುರಾಳೆ ಅವರಿಂದ ಪಿಸ್ತೂಲ್ ನ್ನು ವಶಪಡಿಸಿಕೊಳ್ಳಲಾಗಿತ್ತು.  ಈತನನ್ನು ಔರಾಂಗಾಬಾದ್ ನಲ್ಲಿ ಆಗಸ್ಟ್ 18 ರಂದು ಸಿಬಿಐ ಬಂಧಿಸಿತ್ತು.

ಮಹಾರಾಷ್ಟ್ರ ಅಂಧಶ್ರದ್ದಾ ನಿರ್ಮೂಲನೆ ಸಮಿತಿ  ಸ್ಥಾಪಕ ನರೇಂದ್ರ ದಾಬೊಲ್ಕರ್ ಅವರನ್ನು  ಆಗಸ್ಟ್ 20, 2013 ರಂದು ಬೈಕ್ ನಲ್ಲಿ ಬಂದು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಮಧ್ಯೆ  ಕಳೆದ ವರ್ಷ ಸೆಪ್ಟೆಂಬರ್  5 ರಂದು ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com