ನಕ್ಸಲ್ ನಂಟಿನ ಸಾಕ್ಷ್ಯಾಧಾರಗಳ ಮೇಲೆ ಹೋರಾಟಗಾರರ ಬಂಧನ: ಮಹಾ ಸರ್ಕಾರ

ಪುಣೆ ಪೊಲೀಸರು ಮಂಗಳವಾರ ದೇಶದ ವಿವಿಧ ನಗರಗಳಲ್ಲಿ ದಾಳಿ ನಡೆಸಿ ಐವರು ಎಡಪಂಥೀಯ ಹೋರಾಟಗಾರರನ್ನು ...
ಬಂಧಿತ ಮಾನವ ಹಕ್ಕುಗಳ ಹೋರಾಟಗಾರ ಅರುಣ್ ಫೆರೀರಾ
ಬಂಧಿತ ಮಾನವ ಹಕ್ಕುಗಳ ಹೋರಾಟಗಾರ ಅರುಣ್ ಫೆರೀರಾ
ಮುಂಬೈ: ಪುಣೆ ಪೊಲೀಸರು ಮಂಗಳವಾರ ದೇಶದ ವಿವಿಧ ನಗರಗಳಲ್ಲಿ ದಾಳಿ ನಡೆಸಿ ಐವರು ಎಡಪಂಥೀಯ ಹೋರಾಟಗಾರರನ್ನು ಬಂಧಿಸಿರುವುದನ್ನು ಮಹಾರಾಷ್ಟ್ರ ಸರ್ಕಾರ ಬುಧವಾರ ಸಮರ್ಥಿಸಿಕೊಂಡಿದೆ.
ನಕ್ಸಲ್ ನಂಟು ಹೊಂದಿರುವ ಸಾಕ್ಷ್ಯಗಳ ಆಧಾರದ ಮೇಲೆಯೇ  ಹೋರಾಟಗಾರರನ್ನು ಬಂಧಿಸಲಾಗಿದೆ ಎಂದು ಮಹರಾಷ್ಟ್ರ ಗೃಹ ಸಚಿವ ದೀಪಕ್ ಕೇಸರಕರ್ ಅವರು ಹೇಳಿದ್ದಾರೆ.
ಬಂಧಿತ ಹೋರಾಟಗಾರರು ನಕ್ಸಲ್ ಚಳವಳಿಯೊಂದಿಗೆ ನಂಟು ಹೊಂದಿರುವ ಬಗ್ಗೆ ನಮ್ಮ ಬಳಿ ಸಾಕ್ಷ್ಯ ಇವೆ. ಸಾಕ್ಷ್ಯ ಇಲ್ಲದಿದ್ದರೆ ನಾವು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಕ್ಸಲ್ ಕಾರ್ಯಕರ್ತರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಸರಕರ್ ಅವರು ತಿಳಿಸಿದ್ದಾರೆ.
ಯಾರನ್ನೋ ಓಲೈಸುವುದಕ್ಕಾಗಿ ನಾವು ಈ ಕ್ರಮ ತೆಗೆದುಕೊಂಡಿಲ್ಲ. ನಕ್ಸಲರು ಭಾರತದ ವಿರುದ್ಧ ಯುದ್ಧ ನಡೆಸುತ್ತಿದ್ದಾರೆ ಎಂದು ಮಹಾ ಗೃಹ ಸಚಿವರು ಹೇಳಿದ್ದಾರೆ.
ದೆಹಲಿ, ಹೈದರಾಬಾದ್ ಸೇರಿದಂತೆ ನಿನ್ನೆ ದೇಶದ 10 ಹೋರಾಟಗಾರರ ಮನೆ ಮೇಲೆ ದಾಳಿ ನಡೆಸಿದ್ದ ಪುಣೆ ಪೊಲೀಸರು, ಕ್ರಾಂತಿಕಾರಿ ಬರಹಗಾರ ವರವರ ರಾವ್ ಸೇರಿದಂತೆ ಐವರು ಹೋರಾಟಗಾರರನ್ನು ಬಂಧಿಸಿದ್ದಾರೆ. 
ನಕ್ಸಲ್‌ ಪತ್ರ ಆಧಾರ: ಇತ್ತೀಚೆಗೆ ಮಾವೋವಾದಿ ಬೆಂಬಲಿಗ ರೋನಾ ಜಾಕೊಬ್‌ ವಿಲ್ಸನ್‌ ಎಂಬಾತನ ದಿಲ್ಲಿಯ ನಿವಾಸದಲ್ಲಿ ದೊರೆತ ಮೋದಿ ಹತ್ಯೆ ಸಂಚಿನ ಕುರಿತಾದ ಪತ್ರವನ್ನು ಆಧರಿಸಿ ಮತ್ತು ಈ ಸಂಬಂಧ ಬಂಧಿಸಲಾದ ಐವರು ಆರೋಪಿಗಳ ಹೇಳಿಕೆಗಳನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com