
ನವದೆಹಲಿ: ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿರುವ ಶಂಕೆಯಿಂದ ದೇಶದ ಪ್ರಮುಖ ಎಡಪಂಥೀಯ ಕಾರ್ಯಕರ್ತರನ್ನು ಬಂಧಿಸಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನವಭಾರತದಲ್ಲಿ ಕೇವಲ ಒಂದೇ ಒಂದು ಸರ್ಕಾರೇತರ ಸಂಘಟನೆಗೆ ಜಾಗವಿದೆ ಅದು ಆರ್ ಎಸ್ಎಸ್ ಎಂದು ಟೀಕಿಸಿದ್ದಾರೆ.
ಮಹಾರಾಷ್ಟ್ರ ಪೊಲೀಸರು ನಿನ್ನೆ ಹಲವು ರಾಜ್ಯಗಳಲ್ಲಿನ ಪ್ರಮುಖ ಎಡಪಂಥೀಯ ಕಾರ್ಯಕರ್ತರ ನಿವಾಸದ ಮೇಲೆ ದಾಳಿ ನಡೆಸಿ ಕನಿಷ್ಠ ಐವರನ್ನು ಬಂಧಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 31ರಂದು ಎಲ್ಗರ್ ಪರಿಶತ್ ಸಭೆ ಮುಗಿದ ನಂತರ ಪುಣೆಯ ಸಮೀಪ ಕೊರೆಗಾಂವ್-ಭೀಮಾ ಗ್ರಾಮದಲ್ಲಿ ದಲಿತರು ಮತ್ತು ಮೇಲ್ಜಾತಿಯ ಪೇಶಾವರರ ಮಧ್ಯೆ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ತನಿಖೆಯ ಭಾಗವಾಗಿ ಈ ಬಂಧನ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಭಾರತದಲ್ಲಿ ಕೇವಲ ಒಂದೇ ಒಂದು ಎನ್ ಜಿಒಗೆ ಸ್ಥಾನವಿದೆ, ಅದು ಆರ್ ಎಸ್ಎಸ್. ಬೇರೆಲ್ಲಾ ಎನ್ ಜಿಒಗಳನ್ನು ಮುಚ್ಚಿರಿ ಎಲ್ಲಾ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿ ಮತ್ತು ದೂರು ಹೇಳುವವರನ್ನು ಆರೋಪಿಸುವವರನ್ನು ಗುಂಡಿಕ್ಕಿ ಕೊಲ್ಲಿ, ನವಭಾರತಕ್ಕೆ ಸ್ವಾಗತ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
Advertisement