ಭೀಮಾ-ಕೊರೆಗಾಂವ್ ಹಿಂಸಾಚಾರ ಸಂಬಂಧ ಬಂಧನ; ರೋಮಿಲಾ ಥಾಪರ್ ಸೇರಿ ಐವರು ಸುಪ್ರೀಂ ಮೊರೆ, ಇಂದು ಅರ್ಜಿ ವಿಚಾರಣೆ

ಭೀಮಾ ಕೊರೆಗಾಂವ್ ಹಿಂಸಾಕೃತ್ಯಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಪೊಲೀಸರು ದೇಶಾದ್ಯಂತ...
ಪುಣೆ ಪೊಲೀಸರಿಂದ ನಿನ್ನೆ ಬಂಧಿತರಾದ ಮಾನವ ಹಕ್ಕುಗಳ ಹೋರಾಟಗಾರ ಅರುಣ್ ಫೆರ್ರೈರಾ
ಪುಣೆ ಪೊಲೀಸರಿಂದ ನಿನ್ನೆ ಬಂಧಿತರಾದ ಮಾನವ ಹಕ್ಕುಗಳ ಹೋರಾಟಗಾರ ಅರುಣ್ ಫೆರ್ರೈರಾ

ನವದೆಹಲಿ: ಭೀಮಾ ಕೊರೆಗಾಂವ್  ಹಿಂಸಾಕೃತ್ಯಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಪೊಲೀಸರು ದೇಶಾದ್ಯಂತ ದಾಳಿ ನಡೆಸಿ ಮಾನವ ಹಕ್ಕುಗಳ ಹೋರಾಟ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಇತಿಹಾಸತಜ್ಞ ರೊಮಿಲಾ ತಾಪರ್ ಮತ್ತು ಇತರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಬಂಧಿಸಿರುವ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಅವರು ಕೋರಿದ್ದಾರೆ.

ಬಂಧನ ಘಟನೆ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ವ್ಯಾಪಕ ಬಂಧನ ಮಾಡಿದ್ದೇಕೆ ಎಂದು ಮಹಾರಾಷ್ಟ್ರ ಸರ್ಕಾರ ವಿವರಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇಂದು ಅಪರಾಹ್ನ 3.45ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ಈ ಮಧ್ಯೆ, ಪುಣೆ ಪೊಲೀಸರು ತಮ್ಮನ್ನು ಬಂಧಿಸಿರುವ ಕ್ರಮ ಕಾನೂನುಬಾಹಿರ ಎಂದು ಅರ್ಜಿ ಸಲ್ಲಿಸಿರುವ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಖ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಇಂದು ಮಧ್ಯಾಹ್ನ 2.15ಕ್ಕೆ ನಡೆಸಲಿದೆ.

ದಾಖಲೆಗಳ ಅನುವಾದಿತ ಪ್ರತಿ  ಇನ್ನೂ ಸಿದ್ದವಾಗಿಲ್ಲದಿರುವುದರಿಂದ 12 ಗಂಟೆಗೆ ನೀಡುವುದಾಗಿ ಮಹಾರಾಷ್ಟ್ರ ಪೊಲೀಸರು ದೆಹಲಿ ಹೈಕೋರ್ಟ್ ಗೆ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com