ಬಹುಕೋಟಿ ಮೇವು ಹಗರಣ: ರಾಂಚಿ ಕೋರ್ಟ್ ಗೆ ಲಾಲೂ ಶರಣು; ಜೈಲಿನಲ್ಲೆ ಚಿಕಿತ್ಸೆಗೆ ಜಡ್ಜ್ ಸೂಚನೆ

ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿಯಾಗಿ ಜೈಲುವಾಸ ಅನುಭವಿಸುತ್ತಿರುವ ಆರ್ ಜೆ ಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ತಾತ್ಕಾಲಿಕ ...
ಲಾಲೂ ಪ್ರಸಾದ್ ಯಾದವ್
ಲಾಲೂ ಪ್ರಸಾದ್ ಯಾದವ್
ರಾಂಚಿ: ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿಯಾಗಿ ಜೈಲುವಾಸ ಅನುಭವಿಸುತ್ತಿರುವ ಆರ್ ಜೆ ಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ತಾತ್ಕಾಲಿಕ ಜಾಮೀನು ಅವಧಿ ಅಂತ್ಯಗೊಂಡಿದ್ದು, ಇಂದು ಸಿಬಿಐ ವಿಶೇಷ ಕೋರ್ಟ್ ಗೆ ಶರಣಾಗಿದ್ದಾರೆ. 
ಆಗಸ್ಟ್ 30ರೊಳಗೆ ಕೋರ್ಟ್ ಗೆ ಶರಣಾಗಬೇಕು ಎಂದು ನ್ಯಾಯಾಲಯ ಸೂಚಿಸಿದ್ದ ಹಿನ್ನೆಲೆಯಲ್ಲಿ, ಲಾಲೂ ನಿನ್ನೆ ಪಾಟ್ನಾದಿಂದ ರಾಂಚಿಗೆ ಆಗಮಿಸಿದ್ದರು. 
ಲಾಲೂ ಪ್ರಸಾದ್ ಹಲವು ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಲಾಲು ಪರ ವಕೀಲ ಪ್ರಬಾತ್ ಕುಮಾರ್ ನ್ಯಾಯಾಧೀಶರಿಗೆ ತಿಳಿಸಿದರು, ಹೀಗಾಗಿ ಲಾಲೂ ಪ್ರಸಾದ್ ಅವರಿಗೆ ಬಿಸ್ರಾ ಮುಂಡಾ ಜೈಲಿನಲ್ಲೇ ಚಿಕಿತ್ಸೆಗೆ ಅವಕಾಶ ಮಾಡುವಂತೆ ನ್ಯಾಯಾದೀಶ ಎಸ್.ಎಸ್ ಪ್ರಸಾದ್ ಸೂಚಿಸಿದ್ದಾರೆ.
ರಾಂಚಿಯ ರಾಜೇಂದ್ರ ಮೆಡಿಕಲ್ ಸೈನ್ಸ್ ಕಾಲೇಜಿನ  ವೈದ್ಯ ಉಮೇಶ್ ಅವರ ಬಳಿ ಚಿಕಿತ್ಸೆ ಪಡೆಯುವಂತೆ ಕೋರ್ಟ್ ನಿರ್ದೇಶನ ನೀಡಿದೆ. 
ಬಹುಕೋಟಿ ಮೇವು ಹಗರಣದಲ್ಲಿ ಲಾಲು ಪ್ರಸಾದ್ ತಪ್ಪಿತಸ್ಥ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಕಳೆದ ವರ್ಷದ ಡಿಸೆಂಬರ್ ನಿಂದ ಲಾಲೂ ಜೈಲು ಅನುಭವಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com