ರಾಹುಲ್ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆ ಕುರಿತು 'ಚೀನಾ ಗಾಂಧಿ' ಎಂದು ಬಿಜೆಪಿ ಟೀಕೆ!

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೈಲಾಸ ಮಾನಸ ಸರೋವರ ಯಾತ್ರೆ ಬಗ್ಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಚೀನಾದೊಂದಿಗಿನ ಗೀಳು ರಾಹುಲ್ ಗಾಂಧಿಗೆ ಹೆಚ್ಚಾಗಿದೆ ಎಂದು ಹೇಳಿದೆ.
ಸಂಬೀತ್ ಪಾತ್ರ
ಸಂಬೀತ್ ಪಾತ್ರ
ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೈಲಾಸ ಮಾನಸ ಸರೋವರ ಯಾತ್ರೆ ಬಗ್ಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಚೀನಾದೊಂದಿಗಿನ ಗೀಳು ರಾಹುಲ್ ಗಾಂಧಿಗೆ ಹೆಚ್ಚಾಗಿದೆ ಎಂದು ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬೀತ್ ಪಾತ್ರ,  ರಾಹುಲ್ ಗಾಂಧಿ ಏಕೆ ಚೀನಾದ ವಕ್ತಾರರಂತೆ ವರ್ತಿಸುತ್ತಾರೆ ಎಂದು ಪ್ರಶ್ನಿಸಿದರಲ್ಲದೇ,  ರಾಹುಲ್ ಗಾಂಧಿ  ಚೀನಾದ ಗಾಂಧಿ ಅಲ್ಲ ಎಂಬುದನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಭಾರತದಲ್ಲಿರುವ ಚೀನಾ ರಾಯಬಾರಿಗೆ  ಇಂದಿರಾಗಾಂಧಿ ವಿಮಾನನಿಲ್ದಾಣದಲ್ಲಿ ರಾಹುಲ್ ಗಾಂಧಿ ಏಕೆ  ಅದ್ದೂರಿಯಾಗಿ ಬೀಳ್ಗೊಡುತ್ತಾರೆ ? ಜಗತ್ತಿನಾದ್ಯಂತ ಚೀನಾ ಬಗ್ಗೆ ಏಕೆ ಮಾತನಾಡುತ್ತಾರೆ. ಚೀನಾ ಪರವಾಗಿ ಪ್ರಚಾರ ಮಾಡುವಂತೆ ಅವರನ್ನು ನೇಮಿಸಲಾಗಿದೆಯೇ  ಎಂದು  ಸಂಬೀತ್ ಪಾತ್ರ ಪ್ರಶ್ನೆಗಳ ಸುರಿಮಳೆಗರೆದರು.
2008ರ ಒಲಿಂಪಿಕ್ಸ್ ಕ್ರೀಡಾಕೂಟದ ಸಂದರ್ಭದಲ್ಲಿ ಸೋನಿಯಾಗಾಂಧಿ ಹಾಗೂ ಅವರ ಇಡೀ ಕುಟುಂಬವನ್ನು ಚೀನಾ ಸರ್ಕಾರ ಅದ್ದೂರಿಯಾಗಿ ಬೀಳ್ಗೊಟ್ಟಿತ್ತು. ಈ ಬಗ್ಗೆ ಬಾಲಿವುಡ್ ಗೀತೆಯ ಮೂಲಕ ಬಿಜೆಪಿ ನಾಯಕರು ದಾಳಿ ನಡೆಸಿದ್ದರು.  ಇದರ ಸಂಬಂಧ ಏನನ್ನು ಸೂಚಿಸುತ್ತದೆ ಎಂದು ವಾಗ್ದಾಳಿ ನಡೆಸಿದ ಸಂಬೀತ್ ಪಾತ್ರ, ಡೊಕ್ಲಾಮ ವಿವಾದ ಬಗ್ಗೆ ರಾಹುಲ್  ಗಾಂಧಿ ಟೀಕೆಯನ್ನು ದೂಕ್ಲಾಮಾ ಎಂದು ಟೀಕಿಸಿದರು.
ಇತ್ತೀಚಿಗಿನ ಯುರೋಪ್ ಪ್ರವಾಸದ ವೇಳೆಯಲ್ಲಿ ಡೋಕ್ಲಾಮ ಬಗ್ಗೆ ಏನೂ ನನ್ನಗೆ ಗೊತ್ತಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ, ಸರ್ಕಾರದ ಮೇಲೆ ಹೇಗೆ ಗಂಭೀರ ಆರೋಪ ಮಾಡುತ್ತಾರೆ ಎಂದು ಸಂಬೀತ್ ಪಾತ್ರ ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com