ಜಮ್ಮು-ಕಾಶ್ಮೀರದ ನಕಲಿ ನಿವಾಸಿಗಳನ್ನು ಗುರುತಿಸಿ ಹೊರಹಾಕಿ: ನ್ಯಾಷನಲ್ ಕಾನ್ಫರೆನ್ಸ್

ಜಮ್ಮು-ಕಾಶ್ಮೀರದಲ್ಲಿನ ನಕಲಿ ನಿವಾಸಿಗಳನ್ನು ಗುರುತಿಸಿ ಹೊರಹಾಕುವುದಕ್ಕೆ ನ್ಯಾಷನಲ್ ಕಾನ್ಫರೆನ್ಸ್ ಆಗ್ರಹಿಸಿದೆ.
Identify fake J&K natives and oust them: NC
Identify fake J&K natives and oust them: NC
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿನ ನಕಲಿ ನಿವಾಸಿಗಳನ್ನು ಗುರುತಿಸಿ ಹೊರಹಾಕುವುದಕ್ಕೆ ನ್ಯಾಷನಲ್ ಕಾನ್ಫರೆನ್ಸ್ ಆಗ್ರಹಿಸಿದೆ. 
ಜಮ್ಮು-ಕಾಶ್ಮೀರದ ಸ್ಥಳೀಯ ನಿವಾಸಿಗಳಿಗೆ ನಿರ್ದಿಷ್ಟ ವಿಶೇಷ ಸವಲತ್ತುಗಳನ್ನು ನೀಡುವ ಆರ್ಟಿಕಲ್ 35ಎ ನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ನ್ಯಾಷನಲ್ ಕಾನ್ಫರೆನ್ಸ್ ನ ಪ್ರಾಂತೀಯ ಅಧ್ಯಕ್ಷ ದೇವೇಂದರ್ ಸಿಂಗ್ ರಾಣ ಈ ವಿಷಯ ಪ್ರಸ್ತಾಪಿಸಿದ್ದಾರೆ.
ಬಿಜೆಪಿ-ಪಿಡಿಪಿ ಸರ್ಕಾರದ ವಿರುದ್ಧ ಮಾತನಾಡಿರುವ ರಾಣ, ಬಿಜೆಪಿ-ಪಿಡಿಪಿ ಸರ್ಕಾರ ಕಾಶ್ಮೀರ ಮೂಲ ನಿವಾಸಿಗಳ ಹಕ್ಕು, ಗೌರವ, ಅಸ್ಥಿತ್ವವನ್ನು ಕಡೆಗಣಿಸುತ್ತಿದೆ ಎಂದು ಎಂದು ಆರೋಪಿಸಿದ್ದಾರೆ.  ಸ್ಥಳೀಯರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ನಕಲಿ ನಿವಾಸಿಗಳನ್ನು ಗುರುತಿಸಿ ಹೊರಹಾಕಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಆಗ್ರಹಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com