ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್ ನ್ನು ವಿದೇಶಕ್ಕೆ ಕಡಿಮೆ ಬೆಲೆಗೆ ಮಾರಿಕೊಳ್ಳುತ್ತಿದೆ: ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಇತರೆ ದೇಶಗಳಿಗೆ....
ರಂದೀಪ್ ಸುರ್ಜೇವಾಲ
ರಂದೀಪ್ ಸುರ್ಜೇವಾಲ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಇತರೆ ದೇಶಗಳಿಗೆ ಕಡಿಮೆ ಬೆಲೆಗೆ ಮಾರಿಕೊಳ್ಳುತ್ತಿದೆ ಎಂದು ಶುಕ್ರವಾರ ಕಾಂಗ್ರೆಸ್ ಆರೋಪಿಸಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಸಾಮಾನ್ಯ ಜನರು ಪರದಾಡುವಂತಾಗಿದೆ. ಮುಂಬರುವ ಚುನಾವಣೆಯಲ್ಲಿ ಜನ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಾಂಗ್ರಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಜನರ ಮೇಲೆ "ದೈತ್ಯಾಕಾರದ ತೆರಿಗೆ" ವಿಧಿಸುವ ಮೂಲಕ 11 ಲಕ್ಷ ಕೋಟಿ ರುಪಾಯಿ ಲೂಟಿ ಮಾಡಿದೆ ಎಂದು ಸುರ್ಜೇವಾಲ ಆರೋಪಿಸಿದ್ದಾರೆ.
ಸರ್ಕಾರದ "ದೈತ್ಯಾಕಾರದ ತೆರಿಗೆ"ಯ ಪರಿಣಾಮವೇ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಲು ಕಾರಣ. ತೈಲದ ಮೇಲೆ ಕಠಿಣ ತೆರಿಗೆ ವಿಧಿಸುವ ಮೂಲಕ ಸರ್ಕಾರ 11 ಲಕ್ಷ ಕೋಟಿ ರುಪಾಯಿ ಲಾಭ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ದೂರಿದ್ದಾರೆ.
ಭಾರತದಲ್ಲಿ ಪೆಟ್ರೋಲ್ ಬೆಲೆ 78.86 ರುಪಾಯಿ ಹಾಗೂ ಡೀಸೆಲ್ 70 ರಿಂದ 75 ರುಪಾಯಿ ಇದೆ. ಆದರೆ ಕೇಂದ್ರ ಸರ್ಕಾರ ಇಂಗ್ಲೆಂಡ್, ಅಮೆರಿಕ ಮತ್ತು ಮಲೇಷ್ಯಾ ಸೇರಿದಂತೆ 29 ದೇಶಗಳಲ್ಲಿ ಪೆಟ್ರೋಲ್ ಅನ್ನು ಕೇವಲ 34 ರುಪಾಯಿ ಹಾಗೂ ಡೀಸೆಲ್ ಅನ್ನು ಕೇವಲ 37 ರುಪಾಯಿಗೆ ಮಾರಿಕೊಳ್ಳುತ್ತಿದೆ ಎಂಬುದು ಆರ್ ಟಿಆ ಮಾಹಿತಿಯಿಂದ ಬಹಿರಂಗವಾಗಿದೆ ಎಂದು ಸುರ್ಜೇವಾಲಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com