ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ: ಆರ್ಟಿಕಲ್ 35ಎ ಕುರಿತ ವಿಚಾರಣೆ ಜನವರಿ 2019ಕ್ಕೆ ಮುಂದೂಡಿಕೆ

ಜಮ್ಮು ಮತ್ತು ಕಾಶ್ಮೀರ ವಿಶೇಷ ಸವಲತ್ತುಗಳು ಮತ್ತು ಹಕ್ಕುಗಳಿಗೆ ಸಂಬಂಧಿಸಿದ ಸಂವಿಧಾನದ 35ಎ ವಿಭಾಗದ ಸಿಂಧುತ್ವವನ್ನು ಕುರಿತ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಶೇಷ ಸವಲತ್ತುಗಳು ಮತ್ತು ಹಕ್ಕುಗಳಿಗೆ ಸಂಬಂಧಿಸಿದ ಸಂವಿಧಾನದ 35ಎ ವಿಭಾಗದ ಸಿಂಧುತ್ವವನ್ನು ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಜನವರಿ 2019 ರವರೆಗೆ ಮುಂದೂಡಿದೆ.
ವರದಿ ಪ್ರಕಾರ ಸುಪ್ರೀಂ ಕೋರ್ಟ್ ಮುಂದಿನ ವರ್ಷ ಜನವರಿ 19 ರಂದು ಈ ಸಂಬಂಧ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಈ ವರ್ಷಾಂತ್ಯಕ್ಕೆ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಪಂಚಾಯತ್ ಚುನಾವಣೆ ನಡೆಯುವ ಕಾರಣ 35ಎ ವಿಚಾರಣೆಯನ್ನು ಮುಂದೂಡಬೇಕೆಂದು ಕೇಂದ್ರ ಹಾಗೂ ಜಮ್ಮು ಕಾಶ್ಮೀರ ರಾಜ್ಯ ಸರ್ಕಾರಗಳೆರಡೂ ಮನವಿ ಮಾಡಿದ್ದವು.
ವಕೀಲ ಡಿ.ಕೆ.ದುಬೆ ಈ ಸಂಬಂಧ ಮಾಹಿತಿ ನೀಡಿ "ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮನವಿಯಂತೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ" ಎಂದಿದ್ದಾರೆ.
ವಕೀಲ ವರುಣ್ ಕುಮಾರ್ ಸಹ ಈ ಸಂಬಂಧ ಮಾತನಾಡಿದ್ದು ಉನ್ನತ ನ್ಯಾಯಾಲಯ ಕಾಶ್ಮೀರ ವಿಶೇಷ ಸ್ಥಾನಮಾನ ಕುರಿತ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಮುಂದಿನ ಜನವರಿಗೆ ಮುಂದೂಡಿದೆ ಎಂದು ತಿಳಿಸಿದರು.
ಆಗಸ್ಟ್ 27ರಂದು ಸುಪ್ರೀಂ ಕೋರ್ಟ್ ನಲ್ಲಿ ಈ ಸಂವ್ಬಂಧ ವಿಚಾರಣೆ ನಡೆದಿದ್ದು ಆ ವೇಳೆ ಸಂವಿಧಾನದ 35ಎ  ವಿಭಾಗ ರದ್ದಾಗಿದೆ ಎಂದು ಗಾಳಿಸುದ್ದಿ ಸಹ ಹಬ್ಬಿತ್ತು. ಇದರಿಂದಾಗಿ ಕಾಶ್ಮೀರದ ಕೆಲ ಪ್ರದೇಶಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com