ಸರಣಿ ಬ್ಯಾಂಕ್ ರಜೆ ಕುರಿತ ವಾಟ್ಸಪ್ ವೈರಲ್ ಸಂದೇಶ ಸುಳ್ಳು: ಬ್ಯಾಂಕ್ ಅಧಿಕಾರಿಗಳ ಸ್ಪಷ್ಟನೆ

ಸರಣಿ ಬ್ಯಾಂಕ್ ರಜೆ ಕುರಿತ ವಾಟ್ಸ್ ಆಪ್ ಸಂದೇಶಗಳು ವೈರಲ್ ಆಗುತ್ತಿದ್ದು, ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸರಣಿ ಬ್ಯಾಂಕ್ ರಜೆ ಕುರಿತ ವಾಟ್ಸಪ್ ವೈರಲ್ ಸಂದೇಶ ಸುಳ್ಳು: ಬ್ಯಾಂಕ್ ಅಧಿಕಾರಿಗಳ ಸ್ಪಷ್ಟನೆ
ಸರಣಿ ಬ್ಯಾಂಕ್ ರಜೆ ಕುರಿತ ವಾಟ್ಸಪ್ ವೈರಲ್ ಸಂದೇಶ ಸುಳ್ಳು: ಬ್ಯಾಂಕ್ ಅಧಿಕಾರಿಗಳ ಸ್ಪಷ್ಟನೆ
ಬೆಂಗಳೂರು:ಸರಣಿ ಬ್ಯಾಂಕ್ ರಜೆ ಕುರಿತ ವಾಟ್ಸ್ ಆಪ್ ಸಂದೇಶಗಳು ವೈರಲ್ ಆಗುತ್ತಿದ್ದು, ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 
ಸೆ.02-09 ರ ವರೆಗೆ ಬ್ಯಾಂಕ್ ರಜೆ ಇದ್ದು ಎಟಿಎಂ ಗಳಲ್ಲಿ ಹಣ ಇರುವುದಿಲ್ಲ ಎಂದು ವಾಟ್ಸ್ ಆಪ್ ಸಂದೇಶ ವೈರಲ್ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಬ್ಯಾಂಕ್ ಅಧಿಕಾರಿಗಳು, ’ಪಿಂಚಣಿ ವಿಷಯಕ್ಕೆ ಸಂಬಂಧಿಸಿದಂತೆ ನೌಕರರು ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಸೆ.4-5 ರಂದು ಆರ್ ಬಿಐ ಬಂದ್ ಆಗಿರಲಿದೆ. ಉಳಿದ ಬ್ಯಾಂಕ್ ಗಳು ಸೆ.02 (ಭಾನುವಾರ) ಹಾಗೂ ಸೆ.3 ರಂದು ಜನ್ಮಾಷ್ಟಮಿಯಂದು ಹಾಗೂ ಸೆ.08-09 (ಶನಿವಾರ, ಭಾನುವಾರ) ಗಳಂದು ಬಂದ್ ಆಗಿರಲಿವೆ ಎಂದು ಹೇಳಿದ್ದಾರೆ. 
ನೌಕರರ ಪ್ರತಿಭಟನೆಯಿಂದಾಗಿ ಎಟಿಎಂ ಗಳಿಗಾಗಲೀ ಆನ್ ಲೈನ್ ಟ್ರಾನ್ಸ್ಫರ್ ಗಾಗಲೀ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಥಾಮಸ್ ಫ್ರಾಂಕೊ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com