ಪೋಸ್ಟರ್ ವಿವಾದ: ಟ್ವಿಟ್ಟರ್ ಸಿಇಒ ವಿರುದ್ಧ ಎಫ್ಐಆರ್ ಗೆ ಕೋರ್ಟ್ ಆದೇಶ

ಸಾಮಾಜಿಕ ತಾಣದಲ್ಲಿ ಬ್ರಾಹ್ಮಣ ವಿರೋಧಿ ಪೋಸ್ಟರ್ ಹಂಚಿಕೊಂಡ ಟ್ವಿಟ್ಟರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ)...
ಜಾಕ್ ಡೋರ್ಸೆ
ಜಾಕ್ ಡೋರ್ಸೆ
ಜೋಧಪುರ್: ಸಾಮಾಜಿಕ ತಾಣದಲ್ಲಿ ಬ್ರಾಹ್ಮಣ ವಿರೋಧಿ ಪೋಸ್ಟರ್ ಹಂಚಿಕೊಂಡ ಟ್ವಿಟ್ಟರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ಜಾಕ್ ಡೋರ್ಸೆ ಅವರಿಗೆ ಈಗ ಸಂಕಷ್ಟ ಎದುರಾಗಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜೋಧಪುರ್ ಕೋರ್ಟ್ ಶನಿವಾರ ಪೊಲೀಸರಿಗೆ ಆದೇಶಿಸಿದೆ.
ಡೋರ್ಸೆ ಅವರು ಕಾರ್ಯಕ್ರಮವೊಂದರಲ್ಲಿ ಬ್ರಾಹ್ಮಣಶಾಹಿ, ಪುರೋಹಿತಶಾಹಿ ಮನಸ್ಥಿತಿಯನ್ನು ಹೊಡೆದುರುಳಿಸಿ ಎಂಬ ಪೋಸ್ಟರ್ ಹಿಡಿದು ಮಹಿಳೊಬ್ಬರೊಂದಿಗೆ ಫೋಟೋ ತೆಗೆಸಿಕೊಂಡು, ಅದನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಮತ್ತು ಬ್ರಾಹ್ಮಣ ಸಮುದಾಯ ಅವಮಾನಿಸಿದ್ದಾರೆ ಎಂದು ಆರೋಪಿಸಿ ರಾಜಕುಮಾರ್ ಶರ್ಮಾ ಎಂಬುವವರು ಟ್ವೀಟರ್ ಸಿಇಒ ವಿರುದ್ಧ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಟ್ವಿಟ್ಟರ್ ಸಿಇಒ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಭಾರತೀಯರು ಟ್ವಿಟ್ಟರ್ ಹೇಗೆ ಬಳಸುತ್ತಿದ್ದಾರೆ ಎಂಬ ಕಾರ್ಯಕ್ರಮದಲ್ಲಿ ಜಾಕ್ ಡೋರ್ಸೆ ಭಾಗಿಯಾಗಿದ್ದರು. ಈ ವೇಳೆ ಮಹಿಳಾ ಪತ್ರಕರ್ತೆಯರೊಂದಿಗೆ ಟ್ವಿಟ್ಟರ್ ಸಿಇಒ ಸಂವಾದ ನಡೆಸಿದರು. ಬಳಿಕ ಜಾಕ್ ಡೋರ್ಸೆ ಪ್ಲೆಕಾರ್ಡ್‌ವೊಂದನ್ನು ಹಿಡಿದು ಕೆಲವು ಮಹಿಳೆಯರ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ. ಇದರಲ್ಲಿ ಪುರುಷಾಧಿಪತ್ಯ ಹಾಗೂ ಬ್ರಾಹ್ಮಣಶಾಹಿಯನ್ನು ನಾಶ ಮಾಡಿ ಎಂದು ಬರೆದಿದ್ದು, ಬ್ರಾಹ್ಮಣ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಸಂಬಂಧ ಟ್ವಿಟ್ಟರ್ ಈಗಾಗಲೇ ಕ್ಷಮೆ ಕೇಳಿದ್ದು, ದಲಿತ ಸಮುದಾಯಕ್ಕೆ ಸೇರಿದ ಪತ್ರಕರ್ತೆಯೊಬ್ಬರು ಈ ಪೋಸ್ಟರ್ ಕೊಡುಗೆಯಾಗಿ ನೀಡಿದ್ದಾರೆ. ಇದು ನಮ್ಮ ಸಿಇಒ ಜಾಕ್ ಡೋರ್ಸೆಯವರ ಅಭಿಪ್ರಾಯವಲ್ಲ ಎಂದು ಸ್ಪಷ್ಟನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com