ಸಂಗ್ರಹ ಚಿತ್ರ
ದೇಶ
ದೆಹಲಿ: ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಬರೋಬ್ಬರಿ 25 ಕೋಟಿ ರು. ವಶ
ದೆಹಲಿಯ ವಿವಿಧ ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಐಟಿ ದಾಳಿಯಲ್ಲಿ ಬರೋಬ್ಬರಿ 25 ಕೋಟಿ ರುಪಾಯಿ ವಶಪಡಿಸಿಕೊಂಡಿದ್ದಾರೆ...
ನವದೆಹಲಿ: ದೆಹಲಿಯ ವಿವಿಧ ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಐಟಿ ದಾಳಿಯಲ್ಲಿ ಬರೋಬ್ಬರಿ 25 ಕೋಟಿ ರುಪಾಯಿ ವಶಪಡಿಸಿಕೊಂಡಿದ್ದಾರೆ.
ಚಾಂದಿನಿ ಚೌಕ್ ಪ್ರದೇಶ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಖಾಸಗಿ ಲಾಕರ್ ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ಹವಾಲ ದಂಧೆಕೋರರು ಇಷ್ಟು ಮೊತ್ತದ ಹಣವನ್ನು ಲಾಕರ್ ಗಳಲ್ಲಿ ಇರಿಸಿದ್ದರು.
ದೆಹಲಿ ಮೂಲದ ತಂಬಾಕು ವ್ಯಾಪಾರಸ್ಥರು, ರಸಾಯನಿಕ ಮಾರಾಟಗಾರರು ಹಾಗೂ ಒಣ ಹಣ್ಣು ವ್ಯಾಪಾರಿಗಳಿಗೆ ಸೇರಿರಬಹುದು ಎಂದು ಶಂಕಿಸಲಾಗಿದೆ. ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ಹವಾಲ ಮಧ್ಯವರ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ