ಪಿಒಕೆಯಲ್ಲಿರುವ ಶಾರದಾಪೀಠ ಯಾತ್ರೆಗೆ ಮೆಹಬೂಬಾ ಮುಫ್ತಿ ಒತ್ತಾಯ, ಪ್ರಧಾನಿಗೆ ಪತ್ರ

ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಶಾರದಾಪೀಠ ಯಾತ್ರೆಗೆ ಯಾತ್ರಾರ್ಥಿಗಳಿಗೆ ಅವಕಾಶ ನೀಡಬೇಕೆಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ.
Mehbooba
Mehbooba
ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಶಾರದಾಪೀಠ ಯಾತ್ರೆಗೆ ಯಾತ್ರಾರ್ಥಿಗಳಿಗೆ ಅವಕಾಶ ನೀಡಬೇಕೆಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ.
ಶಾರದಾಪೀಠ ಯಾತ್ರೆಗೆ ಭಕ್ತಾದಿಗಳಿಗೆ ಅವಕಾಶ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಗ್ರಹಿಸಿರುವ ಮೆಹಬೂಬಾ ಮುಫ್ತಿ, ಕರ್ತಾರ್ ಪುರ ಕಾರಿಡಾರ್ ಮಾದರಿಯಲ್ಲೇ ಶಾರದಾ ಪೀಠವನ್ನು ಪುನರುಜ್ಜೀವನಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. 
ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ಎಲ್ಒಸಿ ಬಳಿ ಇರುವ ಶಾರದಾಪೀಠ ದೇವಾಲಯ ಭಗ್ನ ಸ್ಥಿತಿಯಲ್ಲಿದ್ದು, ಪುನರುಜ್ಜೀವನಗೊಳಿಸಬೇಕೆಂಬ ಆಗ್ರಹ  ಹೆಚ್ಚುತ್ತಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮಿಗಳವರು ಪ್ರಧಾನಿ ನರೇಂದ್ರ ಮೋದಿ ಮೋದಿ ಅವರಿಗೆ ಪತ್ರ ಬರೆದಿದು, ಯಾತ್ರಾರ್ಥಿಗಳಿಗೆ ಶಾರದಾಪೀಠ ದೇವಾಲ ಸಂದರ್ಶಿಸಲು ಅವಕಾಶ ನೀಡಬೇಕೆಂದಿದ್ದರು. 
ಕರ್ತಾರ್ ಪುರ ಕಾರಿಡಾರ್ ಗೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಭಾರತದೊಂದಿಗೆ ಮಾತುಕತೆಗೆ ಪಾಕಿಸ್ತಾನ ಸಿದ್ಧವಿದೆ, ನಮ್ಮ ಸರ್ಕಾರ ಕಾಶ್ಮೀರ ಶಾರದಾ ಪೀಠವೂ ಸೇರಿದಂತೆ ಪಾಕಿಸ್ತಾನ ಪ್ರದೇಶದಲ್ಲಿರುವ ಹಿಂದೂ ಶ್ರದ್ಧಾ ಕೇಂದ್ರಗಳನ್ನು ಸಂದರ್ಶಿಸುವುದಕ್ಕೆ ಭಾರತೀಯ ಯಾತ್ರಾರ್ಥಿಗಳಿಗೆ ಅನುವು ಮಾಡಿಕೊಡುವುದರ ಪ್ರಸ್ತಾವನೆಯನ್ನು ಪರಿಗಣಿಸಲು ಸಿದ್ಧವಿದೆ ಎಂದಿದ್ದರು. ಈ ಬೆನ್ನಲ್ಲೇ ಮೆಹಬೂಬಾ ಮುಫ್ತಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. 
ಕಾಶ್ಮೀರದಲ್ಲಿರುವ ಶಾರದಾಪೀಠವನ್ನು ತೆರೆಯುವಂತೆ ಆಗ್ರಹಿಸಿ ಬೆಂಗಳೂರಿನ ಶಂಕರಮಠದಲ್ಲಿ ಸೆ.22 ರಂದು ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com