ಪೋಸ್ಟರ್ ವಿವಾದ: ಟ್ವಿಟರ್ ಸಿಇಒ ವಿರುದ್ಧ ಎಫ್ಐಆರ್ ದಾಖಲಿಸಲು ಜೋಧ್ ಪುರ ಕೋರ್ಟ್ ಸೂಚನೆ

ಬ್ರಾಹ್ಮಣ ವಿರೋಧಿ ಪೋಸ್ಟರ್ ಹಾಕಿ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದ ಟ್ವಿಟರ್ ಸಿಇಒ ವಿರುದ್ಧ ಎಫ್ಐಆರ್ ದಾಖಲಿಸಲು ಜೋಧ್ ಪುರ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.
ಪೋಸ್ಟರ್ ವಿವಾದ: ಟ್ವಿಟರ್ ಸಿಇಒ ವಿರುದ್ಧ ಎಫ್ಐಆರ್ ದಾಖಲಿಸಲು ಜೋಧ್ ಪುರ ಕೋರ್ಟ್ ಸೂಚನೆ
ಪೋಸ್ಟರ್ ವಿವಾದ: ಟ್ವಿಟರ್ ಸಿಇಒ ವಿರುದ್ಧ ಎಫ್ಐಆರ್ ದಾಖಲಿಸಲು ಜೋಧ್ ಪುರ ಕೋರ್ಟ್ ಸೂಚನೆ
ಜೋಧ್ ಪುರ: ಬ್ರಾಹ್ಮಣ ವಿರೋಧಿ ಪೋಸ್ಟರ್ ಹಾಕಿ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದ ಟ್ವಿಟರ್ ಸಿಇಒ ವಿರುದ್ಧ ಎಫ್ಐಆರ್ ದಾಖಲಿಸಲು ಜೋಧ್ ಪುರ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. 
ವಿಪ್ರ ಫೌಂಡೇಶನ್ ನ ಯುವ ವಿಭಾಗದ ಉಪಾಧ್ಯಕ್ಷ ರಾಜ್ ಕುಮಾರ್ ಶರ್ಮ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಮೆಟ್ರೋಪಾಲಿಟನ್ ನ್ಯಾಯಾಲಯ, ಎಫ್ಐಆರ್ ದಾಖಲಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ಸಿಇಒನ್ನು ವಿಚಾರಣೆಗೊಳಪಡಿಸುವಂತೆ  ಸೂಚನೆ ನೀಡಿದೆ. 
ಬ್ರಾಹ್ಮಣ ಸಮುದಾಯದ ಆಧಿಪತ್ಯವನ್ನು ಅಂತ್ಯಗೊಳಿಸುವುದಕ್ಕೆ ಕರೆ ನೀಡಿದ್ದ ಪೋಸ್ಟರ್ ನ್ನು ಹಿಡಿದು ಪೋಟೋಗೆ ಪೋಸ್ ನೀಡಿದ್ದಕ್ಕಾಗಿ ಟ್ವಿಟರ್ ಸಿಇಒ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಟ್ವಿಟರ್ ಕ್ಷಮೆಯನ್ನೂ ಯಾಚಿಸಿತ್ತು. ಕ್ಷಮೆಯಿಂದ ತೃಪ್ತರಾಗದ ವಿಪ್ರ ಸಂಘಟನೆ ಕೋರ್ಟ್ ಮೆಟ್ಟಿಲೇರಿತ್ತು 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com