ರಾಜಸ್ತಾನ ಚುನಾವಣೆ: ಬಿಜೆಪಿಗಿಂತಲೂ ವಸುಂಧರಾ ರಾಜೆ ವಿರುದ್ಧ ಹೆಚ್ಚಿನ ಆಡಳಿತ ವಿರೋಧಿ ಅಲೆ

ರಾಜಸ್ತಾನದ ರಾಜಧಾನಿ ಪಿಂಕ್ ಸಿಟಿ ಜೈಪುರದಲ್ಲಿ ಗುಲಾಬಿ ಮನಸ್ಥಿತಿ ಕಂಡುಬರುತ್ತಿಲ್ಲ. ಟ್ರಾಫಿಕ್, ದೂಳು ಮತ್ತಿತರ ಮೂಲಭೂತ ಸಮಸ್ಯೆಗಳೇ ಹೆಚ್ಚಾಗಿದ್ದು, ಬಿಜೆಪಿಗಿಂತಲೂ ವಸುಂಧರಾ ರಾಜೆ ವಿರುದ್ಧ ಆಡಳಿತಾ ವಿರೋಧಿ ಅಲೆ ಕಂಡುಬರುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೈಪುರ: ರಾಜಸ್ತಾನದ ರಾಜಧಾನಿ ಪಿಂಕ್ ಸಿಟಿ ಜೈಪುರದಲ್ಲಿ  ಗುಲಾಬಿ ಮನಸ್ಥಿತಿ ಕಂಡುಬರುತ್ತಿಲ್ಲ. ಟ್ರಾಫಿಕ್, ದೂಳು ಮತ್ತಿತರ ಮೂಲಭೂತ ಸಮಸ್ಯೆಗಳೇ ಹೆಚ್ಚಾಗಿದ್ದು, ಬಿಜೆಪಿಗಿಂತಲೂ ವಸುಂಧರಾ ರಾಜೆ ವಿರುದ್ಧ ಆಡಳಿತಾ ವಿರೋಧಿ ಅಲೆ ಕಂಡುಬರುತ್ತಿದೆ.

ಜೈಪುರಕ್ಕಿಂತಲೂ ರಾಜಸ್ತಾನದ ಇತರೆಡೆಯಲ್ಲಿನ ಆಳವಾದ ಸಮಸ್ಯೆಗಳು ಚುನಾವಣೆಯ ವಿಷಯವಾಗಿದ್ದು, ಪ್ರತಿಯೊಬ್ಬರು ಪ್ರತ್ಯೇಕವಾಗಿ ಯೋಚಿಸುವಂತಾಗಿದೆ. ಆದ್ದರಿಂದ  ಬಿಜೆಪಿ  ಶ್ರೀರಾಮ, ಜೈ ಶ್ರೀರಾಮ ಏಕ ಘೋಷಣೆಯೊಂದಿಗೆ ಪ್ರಚಾರ ನಡೆಸುತ್ತಿದೆ.

ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವಿನ ವಾಗ್ವಾದ, ಆರೋಪ, ಪ್ರತ್ಯಾರೋಪಗಳನ್ನು ಪ್ರತಿಯೊಬ್ಬರು ಅರಿಯುತ್ತಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರ ತಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎನ್ನುವ  ಬಿಜೆಪಿ ಪಕ್ಷದ ಮಾಜಿ ಕಾರ್ಯಕರ್ತ,  ರಾಜೇಶ್ ಗೋಯಲ್,   ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ  ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೆ  ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳುತ್ತಾರೆ.

ಅಶೋಕ್ ಗೆಹ್ಲೂಟ್ ಒಬ್ಬ ಉತ್ತಮ ನಾಯಕ ಎನ್ನುವ ರಾಜೇಶ್ ಗೋಯೆಲ್,  ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ ನೀಡಬೇಕಾಗುತ್ತದೆ.  ಆಡಳಿತಾ ವಿರೋಧಿ ಅಲೆ ನಡುವೆಯೂ ಪರ್ಯಾಯ ವ್ಯಕ್ತಿ ಇಲ್ಲದೆ  ಒಲ್ಲದ ಮನಸ್ಸಿನಿಂದ ಬಿಜೆಪಿಗೆ ಮತ ನೀಡಬೇಕಾಗುತ್ತದೆ ಎಂದು ಹೇಳುತ್ತಾರೆ.

ವಸುಂಧರಾ ರಾಜೆ  ವಿರುದ್ಧ ರೈತರು ಮಾತ್ರವಲ್ಲ, ರಜಪೂತರು, ಕುಶಲಕರ್ಮಿಗಳು  ಆಕ್ರೋಶಗೊಂಡಿದ್ದಾರೆ . ಪ್ರಮುಖವಾದ ಸಂದರ್ಭಗಳಲ್ಲಿಯೂ ರಾಜಸ್ತಾನ ಸರ್ಕಾರದಿಂದ ಯಾವುದೇ ಬೆಂಬಲ ದೊರೆಯಲಿಲ್ಲ ಎಂದು ಕೆಲ ಸಣ್ಣ ಮತ್ತು ಮಧ್ಯಮ ಪ್ರಮಾಣದ ಅಂಗಡಿ ಮಾಲೀಕರು ಪ್ರತಿಕ್ರಿಯಿಸಿದ್ದಾರೆ.ವಸುಂಧರಾ ರಾಜೇ ಮುಖ್ಯಮಂತ್ರಿಯಾದ ಬಳಿಕ ಎಲ್ಲಾ ನಂಬಿಕೆಗಳನ್ನು ಹುಸಿಗೊಳಿಸಿದ್ದಾರೆ ಎಂದು ರಾಜೇಶ್ ಗೊಯಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡೆಮೊ ವಿರುದ್ಧ ಜಿಎಸ್ ಟಿ ಉತ್ತಮ ಕ್ರಮ . ಆದರೆ. ಚುನಾವಣೆಯಲ್ಲಿ ಅದು ಮುಖ್ಯವಲ್ಲ, ನಮ್ಮೊಂದಿಗೆ ಸಂಪರ್ಕದಲ್ಲಿರುವ ಸರ್ಕಾರ ಹಾಗೂ ಮುಖ್ಯಮಂತ್ರಿ ಬೇಕೆಂದು ಮತ್ತೊಬ್ಬ ಅಂಗಡಿ ಮಾಲೀಕರು ಹೇಳುತ್ತಾರೆ.

ಮೊದಲ ಬಾರಿಗೆ ಮತ ಚಲಾಯಿಸುವ ಕಾಲೇಜ್ ವಿದ್ಯಾರ್ಥಿಗಳು ಕೂಡಾ ಜೈಪುರ ಕಾಫಿ ಹಬ್ ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡುಬಂದಿತ್ತು. ಕೆಲವರು ಗ್ರಾಮೀಣ ಪರಿಸ್ಥಿತಿ ಬಗ್ಗೆಮಾತನಾಡುತ್ತದ್ದರು. ಕೆಲ ಕಡೆಗಳಲ್ಲಿ ರಾಜಸ್ತಾನ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಸಚಿನ್ ಪೈಲಟ್  ಬಗ್ಗೆಯೂ ಒಲವೂ ಕಂಡುಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com