ಮರಾಠ ಸಮುದಾಯ ಮೀಸಲಾತಿಗೆ ವಿರೋಧ: ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ

ಮರಾಠ ಮೀಸಲಾತಿ ಕಾಯ್ದೆ ವಿರೋಧಿಸಿ ಬಾಂಬೈ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಕೆವಿಯಟ್ ಅರ್ಜಿ ಸಲ್ಲಿಸಿದ ಬಳಿಕ ವಕೀಲ ಗುಣರತ್ನ ಸಡವರ್ಟಿ ಎಂಬವರು ಈ ಅರ್ಜಿ ದಾಖಲಿಸಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮರಾಠ ಮೀಸಲಾತಿ ಕಾಯ್ದೆ ವಿರೋಧಿಸಿ ಬಾಂಬೈ ಹೈಕೋರ್ಟ್ ನಲ್ಲಿ  ಅರ್ಜಿ ಸಲ್ಲಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಕೆವಿಯಟ್ ಅರ್ಜಿ ಸಲ್ಲಿಸಿದ ಬಳಿಕ ವಕೀಲ ಗುಣರತ್ನ ಸಡವರ್ಟಿ ಎಂಬವರು ಈ ಅರ್ಜಿ ದಾಖಲಿಸಿದ್ದು, ಮರಾಠ ಸಮುದಾಯಕ್ಕೆ ನೀಡಲಾದ ಮೀಸಲಾತಿಯು ಸಂವಿಧಾನದ ಅನುಮತಿ ಮೀರಿದೆ ಎಂದು ವಾದಿಸಿದ್ದಾರೆ.

ಮರಾಠ ಸಮುದಾಯದ ಪರವಾಗಿ ವಿನೋದ್ ಪಾಟೀಲ್ ಎಂಬವರು  ಕೂಡಾ ಹೈಕೋರ್ಟ್ ನಲ್ಲಿ ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ. ನವೆಂಬರ್ 29 ರಂದು ಮರಾಠ ಸಮುದಾಯಕ್ಕೆ ಶೇ. 16 ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿತ್ತು. ನಂತರ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಕೆವಿಯಟ್ ಅರ್ಜಿ ದಾಖಲಿಸಿತ್ತು.

ಕೆವಿಯಟ್  ಕಾಯ್ದೆಯು ಕಾನೂನು ಪ್ರಕ್ರಿಯೆಯಾಗಿದ್ದು, ಸಂಬಂಧಪಟ್ಟ ನ್ಯಾಯಾಲಯಕ್ಕೆ ಮುಂಚಿತವಾಗಿ ಅರ್ಜಿ ದಾಖಲಿಸಲಾಗುತ್ತದೆ. ವಿಚಾರಣೆಯ ನಂತರ ಮಾತ್ರ ನ್ಯಾಯಾಲಯ ತನ್ನ ಆದೇಶವನ್ನು ರವಾನಿಸುತ್ತದೆ.

ಸಾಮಾಜಿಕ ಹಾಗೂ ಆರ್ಥಿಕವಾಗಿ  ಹಿಂದುಳಿದಿರುವ ಮಠಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಮಸೂದೆಗೆ ನವೆಂಬರ್ 30 ರಂದು ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಅಂಕಿತ ಹಾಕಿದ್ದರು.
ಈ ಮಸೂದೆ ಜಾರಿಗೆ ಆಗ್ರಹಿಸಿ 2017ರಿಂದಲೂ ಮರಾಠ ಸಮುದಾಯ ಪ್ರತಿಭಟನೆ ನಡೆಸುತ್ತಿದ್ದರಿಂದ ನವೆಂಬರ್ 18 ರಂದು ಮಹಾರಾಷ್ಟ್ರ ಸರ್ಕಾರದ ಕ್ಯಾಬಿನೆಟ್ ನಲ್ಲಿ ಮಸೂದೆಗೆ ಅನುಮೋದನೆ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com