ಜೈಪುರ: ರಾಜಸ್ತಾನ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ರಾಜಕೀಯ ಪಕ್ಷಗಳು ಪರಸ್ಪರ ಕೆಸೆರೆರೆಚಾಟದಲ್ಲಿ ತೊಡಗಿವೆ, ಧರ್ಮ ಎಂಬುದು ವಯಕ್ತಿಕ ವಿಷಯ, ಯಾವುದೇ ಒಂದು ಪಕ್ಷದ ಪಿತ್ರಾರ್ಜಿತ ಆಸ್ತಿಯಲ್ಲ ಎಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಧರ್ಮ ಯಾವುದು ಎಂಬ ಗೊಂದಲ ಅವರ ಪಕ್ಷದ ಕಾರ್ಯಕರ್ತರಲ್ಲಿ ಮೂಡಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ, ಸಿಂಧಿಯಾ ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯಾವ ರೀತಿಯ ಹಿಂದು, ಹಿಂದೂ ಧರ್ಮದ ಅಡಿಪಾಯದ ಬಗ್ಗೆ ತಿಳಿದಿಲ್ಲ ಎಂದು ಸಿಂಧಿಯಾ ತಿರುಗೇಟು ಹಾಕಿದ್ದಾರೆ, ಧರ್ಮ ಎಂಬುದು ವ್ಯಕ್ತಿಯೊಬ್ಬರ ವೈಯಕ್ತಿಕ ವಿಷಯ, ಅದು ಅವರ ನಂಬಿಕೆ, ಧರ್ಮ ಎಂಬುದು ರಾಜಕೀಯದಲ್ಲಿ ಬರಬಾರದು ಎಂದು ಹೇಳಿದ್ದಾರೆ.