ಸುಬೋಧ್ ಕುಮಾರ್ ಸಿಂಗ್ ಪತ್ನಿ
ಸುಬೋಧ್ ಕುಮಾರ್ ಸಿಂಗ್ ಪತ್ನಿ

ನನ್ನ ಪತಿಯ ಹಂತಕರನ್ನು ಗುಂಡಿಕ್ಕಿ ಕೊಲ್ಲಬೇಕು: ಪೊಲೀಸ್ ಅಧಿಕಾರಿಯ ಪತ್ನಿ

ನನ್ನ ಪತಿಗೆ ಆದ ಗತಿಯೇ ಅವರನ್ನು ಕೊಂದವರಿಗೆ ಆಗುಬೇಕು. ಆಗಲೇ ನಮ್ಮ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಬುಲಂದ್...
Published on
ಲಖನೌ: ನನ್ನ ಪತಿಗೆ ಆದ ಗತಿಯೇ ಅವರನ್ನು ಕೊಂದವರಿಗೆ ಆಗುಬೇಕು. ಆಗಲೇ ನಮ್ಮ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಬುಲಂದ್ ಶಹರ್ ಹಿಂಸಾಚಾರಕ್ಕೆ ಬಲಿಯಾದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರ ಪತ್ನಿ ದುಃಖತಪ್ತರಾಗಿ ಹೇಳಿದ್ದಾರೆ.
ನನ್ನ ಪತಿ ಓರ್ವ ಪೊಲೀಸ್‌ ಅಧಿಕಾರಿಯಾಗಿ ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ ಕರ್ತವ್ಯದಲ್ಲಿ ಎಲ್ಲ ಜವಾಬ್ದಾರಿಗಳನ್ನು ತಾವೇ ವಹಿಸಿಕೊಳ್ಳುತ್ತಿದ್ದರು. ನನ್ನ ಪತಿಯ ಮೇಲೆ ದಾಳಿಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಕರ್ತವ್ಯದಲ್ಲಿದ್ದಾಗ ಅವರು ಎರಡು ಬಾರಿ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದರು. ಈ ಬಾರಿ ಅವರ ಬಲಿದಾನವಾಗಿದೆ. ಆದರೆ ಅವರಿಗೆ ಮಾತ್ರ ನ್ಯಾಯ ಸಿಗುತ್ತಿಲ್ಲ ಎಂದು ಪತ್ನಿ ಗದ್ಗದಿತರಾಗಿ ಹೇಳಿದರು.
ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಸೋಮವಾರ ನಡೆಯುತ್ತಿದ್ದ ಪ್ರತಿಭಟನೆಯೇ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ನಡುವೆ ಆರಂಭವಾದ ಕೋಮು ಸಂಘರ್ಷವನ್ನು ತಡೆಯಲು ಮುಂದಾದ ಸುಬೋಧ್ ಕುಮಾರ್ ಸಿಂಗ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com