ಪ್ರಧಾನಿ ಮೋದಿ ಭಾರತ್ ಮಾತಾ ಕೀ ಜೈ ಎನ್ನಬಾರದು: ರಾಹುಲ್ ಗಾಂಧಿ

ಉದ್ಯೋಗಾವಕಾಶ, ರೈತರ ಸಾಲ ಮನ್ನಾ, ರಾಫೆಲ್ ಒಪ್ಪಂದ, ನೋಟು ನಿಷೆಧದ ವಿಷಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು....
ಪ್ರಧಾನಿ ಮೋದಿ ಭಾರತ್ ಮಾತಾ ಕೀ ಜೈ ಎನ್ನಬಾರದು: ರಾಹುಲ್ ಗಾಂಧಿ
ಪ್ರಧಾನಿ ಮೋದಿ ಭಾರತ್ ಮಾತಾ ಕೀ ಜೈ ಎನ್ನಬಾರದು: ರಾಹುಲ್ ಗಾಂಧಿ
ಜೈಪುರ: ಉದ್ಯೋಗಾವಕಾಶ, ರೈತರ ಸಾಲ ಮನ್ನಾ, ರಾಫೆಲ್ ಒಪ್ಪಂದ, ನೋಟು ನಿಷೆಧದ ವಿಷಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಮೋದಿ ಭಾರತ್ ಮಾತಾ ಕೀ ಜೈ ಎನ್ನಬಾರದು, ಅಂಬಾನಿ ಕೀ ಜೈ ಎನ್ನಬೇಕು ಎಂದು ಹೇಳಿದ್ದಾರೆ. 
2014 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಗಳು ಈಡೇರಿಲ್ಲ. ಪ್ರಧಾನಿ ಮೋದಿ ಭರವಸೆಯಂತೆ ಉದ್ಯೋಗ ಸೃಷ್ಟಿಯಾಗಿದ್ದರೆ ಆಲ್ವಾರ್ ನಲ್ಲಿ ಯುವಕರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. 
ರಾಜಸ್ಥಾನದ ಆಲ್ವಾರ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ತಮ್ಮ ಎಲ್ಲಾ ಭಾಷಣಗಳಲ್ಲೂ ಭಾರತ್ ಮಾತಾ ಕೀ ಜೈ ಎನ್ನುವ ಘೋಷ ವಾಕ್ಯ ಹೇಳುತ್ತಾರೆ. ಆದರೆ ಅನಿಲ್ ಅಂಬಾನಿಯಂತಹ ಕೈಗಾರಿಕೋದ್ಯಮಿಗಾಗಿ ಕಾರ್ಯನಿರ್ವಹಿಸುತ್ತಾರೆ. ಮೋದಿ ಭಾರತ್ ಮಾತಾ ಕೀ ಜೈ ಎಂದು ಹೇಳುವ ಬದಲು ಅನಿಲ್ ಅಂಬಾನಿ ಕೀ ಜೈ, ಮೆಹುಲ್ ಚೋಕ್ಸಿ ಕೀ ಜೈ, ನೀರವ್ ಮೋದಿ ಕೀ ಜೈ ಎಂದು ಹೇಳಬೇಕೆಂದು ರಾಹುಲ್ ಗಾಂಧಿ ಹೇಳಿದ್ದಾರೆ. 
ಭಾರತ್ ಮಾತೆ ರೈತರ, ದೇಶದ ಯುವಜನತೆಯ, ಮಹಿಳೆಯರ ಕಾರ್ಮಿಕರ ಭಾವನೆಗೆ ಸಂಬಂಧಿಸಿದ್ದಾಗಿದೆ, ಭಾರತ ಮಾತೆ ಬಗ್ಗೆ ಮಾತಾಡುತ್ತೀರಿ ಎಂದಾದರೆ ನೀವು ರೈತರನ್ನು ಹೇಗೆ ನಿರ್ಲಕ್ಷಿಸಲು ಸಾಧ್ಯ ಎಂದು ಮೋದಿಗೆ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com