ಬುಲಂದ್‏ಶಹರ್ ಹಿಂಸಾಚಾರ: ರಸ್ತೆ, ಕಾಲೇಜಿಗೆ ಮೃತ ಇನ್ಸ್‏ಪೆಕ್ಟರ್ ಹೆಸರು- ಯೋಗಿ ಆದಿತ್ಯನಾಥ್

ಬುಲಂದ್ ಶಹರ್ ಹಿಂಸಾಚಾರ ಪ್ರಕರಣದಲ್ಲಿ ಮೃತಪಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಹೆಸರನ್ನು ರಸ್ತೆಗೆ ಹಾಗೂ ಕಾಲೇಜಿಗೆ ಇಡುವುದಾಗಿ ...
ಮೃತ ಇನ್ಸ್ ಪೆಕ್ಟರ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ ಸಿಎಂ ಯೋಗಿ ಆದಿತ್ಯ ನಾಥ್
ಮೃತ ಇನ್ಸ್ ಪೆಕ್ಟರ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ ಸಿಎಂ ಯೋಗಿ ಆದಿತ್ಯ ನಾಥ್
ಲಕ್ನೋ:  ಬುಲಂದ್ ಶಹರ್ ಹಿಂಸಾಚಾರ ಪ್ರಕರಣದಲ್ಲಿ ಮೃತಪಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಹೆಸರನ್ನು ರಸ್ತೆಗೆ ಹಾಗೂ ಕಾಲೇಜಿಗೆ ಇಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮೃತ ಇನ್ಸ್ ಪೆಕ್ಟರ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ ನಂತರ ಸಿಎಂ ಯೋಗಿ ಆದಿತ್ಯನಾಥ್ ಈ ಘೋಷಣೆ ಮಾಡಿದ್ದಾರೆ, ಇತಾಹ್ ಗ್ರಾಮದ ಪ್ರಮುಖ ರಸ್ತೆಯಾದ ಜೈತರಿ-ಕುರೋಳಿ ರಸ್ತೆಗೆ ಸುಬೋಧ್ ಕುಮಾರ್ ಸಿಂಗ್ ಶಾಹಿದ್ ಮಾರ್ಗ್ ಎಂದು ಮರು ನಾಮಕರಣ ಮಾಡುವುದಾಗಿ ತಿಳಿಸಿದ್ದಾರೆ. ಹಾಗೂ ಶೈಕ್ಷಣಿಕ ಸಂಸ್ಥೆಗೆ ಇನ್ಸ್ ಪೆಕ್ಟರ್  ಹೆಸರು ಇಡುವುದಾಗಿ ಹೇಳಿದ್ದಾರೆ.
ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಜಿಪಿ ಸಿಂಗ್, ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ, ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಜೊತೆಗೆ ಕೆಲವು ಬ್ಯಾಂಕ್ ಗಳಿಂದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲವನ್ನು ತೀರಿಸಿ, ಮಕ್ಕಳ ವಿಧ್ಯಾಭ್ಯಾಸದ ಜವಾಬ್ದಾರಿ ಹೊರುವುದಾಗಿ ಸರ್ಕಾರ ತಿಳಿಸಿದೆ, ಜೊತೆಗೆ ಮೃತ ಇನ್ಸ್ ಪೆಕ್ಟರ್ ಪತ್ನಿ ಅವರಿಗೆ ವಿಶೇಷ ಪಿಂಚಣಿ ನೀಡುವುದಾಗಿ ಘೋಷಿಸಿದೆ. 
ಮಕ್ಕಳ ವಿದ್ಯಾಭ್ಯಾಸ ಹಾಗೂ ಮನೆ ನಿರ್ಮಾಣಕ್ಕಾಗಿ ಸುಮಾರು 25 ರಿಂದ 30 ಲಕ್ಷ ಸಾಲ ಮಾಡಿದ್ದರು. ಹೀಗಾಗಿ ಅದರ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳುವುದಾಗಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com