ಅಲಿಬಾಗ್ ನಲ್ಲಿರುವ ನೀರವ್ ಮೋದಿ ಬಂಗಲೆ ನೆಲಸಮ: ಹೈಕೋರ್ಟ್ ಗೆ ಮಹಾ ಸರ್ಕಾರ

ಸುಸ್ತಿದಾರ ಚಿನ್ನಾಭರಣಗಳ ಉದ್ಯಮಿ ನೀರವ್ ಮೋದಿಗೆ ಸೇರಿದ ಅಲಿಬಾಗ್ ನಲ್ಲಿರುವ ಬಂಗಲೆಯನ್ನು ನೆಲಸಮ ಮಾಡುವುದಕ್ಕೆ ಆದೇಶ ನೀಡಿರುವುದಾಗಿ ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ನೀರವ್ ಮೋದಿ
ನೀರವ್ ಮೋದಿ
ಮುಂಬೈ: ಸುಸ್ತಿದಾರ ಚಿನ್ನಾಭರಣಗಳ ಉದ್ಯಮಿ ನೀರವ್ ಮೋದಿಗೆ ಸೇರಿದ ಅಲಿಬಾಗ್ ನಲ್ಲಿರುವ ಬಂಗಲೆಯನ್ನು ನೆಲಸಮ ಮಾಡುವುದಕ್ಕೆ ಆದೇಶ ನೀಡಿರುವುದಾಗಿ ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್ ಗೆ ಮಾಹಿತಿ ನೀಡಿದೆ. 
ಅಲಿಬಾಗ್ ನ ಬೀಚ್ ಬಳಿ ನೀರವ್ ಮೋದಿ ನಿರ್ಮಿಸಿರುವ ಬಂಗಲೆ ಅಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಬಂಗಲೆಯನ್ನು ನೆಲಸಮ ಮಾಡಲು ಆದೇಶ ನೀಡಿರುವುದಾಗಿ ಸರ್ಕಾರದ ಪರ ವಕೀಲರಾಗಿರುವ ಪಿಬಿ ಕಾಕ್ಡೆ ಮುಖ್ಯ ನ್ಯಾ. ನರೇಶ್ ಪಾಟೀಲ್ ಹಾಗೂ ನ್ಯಾ. ಎಂ.ಎಸ್ ಕಾರ್ಣಿಕ್ ಅವರಿದ್ದ ವಿಭಾಗೀಯ ಪೀಠಕ್ಕೆ ಮಾಹಿತಿ ನೀಡಿದ್ದಾರೆ. 
ನೀರವ್ ಮೋದಿ ಜೊತೆಗೆ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದ 58 ಖಾಸಗಿ ಕಟ್ಟಡಗಳ ಮಾಲಿಕರಿಗೂ ನೊಟೀಸ್ ಜಾರಿಗೊಳಿಸಲಾಗಿತ್ತು. ಅಲಿಬಾಗ್ ಪ್ರದೇಶದಲ್ಲಿ ಅಕ್ರಮವಾಗಿ ಖಾಸಗಿ ಕಟ್ಟಡಗಳನ್ನು ನಿರ್ಮಿಸಿದ್ದವರ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಈ ಹಿಂದಿನ ಆದೇಶದಲ್ಲಿ ಸೂಚಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com