ಮಹಾರಾಷ್ಟ್ರ: ವೇದಿಕೆ ಮೇಲೆಯೇ ಕುಸಿದು ಬಿದ್ದ ಕೇಂದ್ರ ಸಚಿವ ಗಡ್ಕರಿ
ಕೇಂದ್ರ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಹಾರಾಷ್ಟ್ರದಲ್ಲಿ ನಡೆದ ವಿಶ್ವವಿದ್ಯಾನಿಲಯದ ಕಾರ್ಯಕ್ರಮವೊಂದರಲ್ಲಿ ಹಠಾತ್ತನೆ ಕುಸಿದು ಬಿದ್ದ ಘಟನೆ ಶುಕ್ರವಾರ ನಡೆದಿದೆ.
ಅಹಮದ್ ನಗರ(ಮಹಾರಾಷ್ಟ್ರ): ಕೇಂದ್ರ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಹಾರಾಷ್ಟ್ರದಲ್ಲಿ ನಡೆದ ವಿಶ್ವವಿದ್ಯಾನಿಲಯದ ಕಾರ್ಯಕ್ರಮವೊಂದರಲ್ಲಿ ಹಠಾತ್ತನೆ ಕುಸಿದು ಬಿದ್ದ ಘಟನೆ ಶುಕ್ರವಾರ ನಡೆದಿದೆ.
ಮಹಾರಾಷ್ಟ್ರದ ಅಹಮದ್ ನಗರದ ರಹುರಿಯಲ್ಲಿರುವ ಮಹಾತ್ಮ ಫುಲೆ ಕೃಷಿ ವಿದ್ಯಾಪೀಠ (ಎಂಪಿಕೆವಿ) ಕೃಷಿ ವಿಶ್ವವಿದ್ಯಾನಿಕಯದ ಸಮಾರಂಭದಲ್ಲಿ ಭಾಗವಹಿಸಿದ್ದ ಗಡ್ಕರಿ ರಾಷ್ಟ್ರಗೀತೆ ಹಾಡುವ ವೇಳೆ ಇತರೆ ಗಣ್ಯರೊಡನೆ ವೇದಿಕೆ ಮೇಲೆ ನಿಂತಿದ್ದಾಗ ಕುಸಿದು ಬಿದ್ದಿದ್ದಾರೆ.
ತೀವ್ರ ನಿತ್ರಾಣದಿಂದ ಕಣ್ಣಿಗೆ ಮಂಜು ಕವಿದಂತಾಗಿ ಅವರು ಕುಸಿದಾಗ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿ ಅವರ ನೆರವಿಗೆ ಧಾವಿಸಿ ಉಪಚರಿಸಿದ್ದಾರೆ.
ಮಹಾರಾಷ್ಟ್ರ ಗವರ್ನರ್ ಸಿ. ವಿ. ರಾವ್ ಮತ್ತು ಇತರ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಗಡ್ಕರಿ ಮುಖ್ಯ ಅತಿಥಿಗಳಗಿದ್ದರು.
Shri Nitin Gadkari was in Rahuri, dist Ahmednagar Maharashtra participating in convocation ceremony of Agriculture University. There during the function because of Heat and low sugar he was not feeling well. Available doctors at the venue immediatly provided necessary treatment
ದೇಹದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿದ್ದ ಕಾರಣ (ಲೋ ಶುಗರ್) ಅವರು ನಿತ್ರಾಣಗೊಂಡಿದ್ದಾರೆ ಎಂದು ಅವರ ಪರೀಕ್ಷೆ ನಡೆಸಿದ ವೈದ್ಯಕೀಯ ತಂಡ ಹೇಳಿದೆ.ಸಧ್ಯ ಅವರ ಆರೋಗ್ಯ ಥಿತಿ "ಸ್ಥಿರ" ವಾಗಿದೆ ಎಂದು ತಿಳಿದುಬಂದಿದೆ.