ಜೈಪುರ್: ಶಾಂತ ರೀತಿಯಲ್ಲಿ ನಡೆಯುತ್ತಿದ್ದ ರಾಜಸ್ಥಾನ ವಿಧಾನಸಭಾ ಚುನಾವಣೆ ಮಧ್ಯಾಹ್ನದ ವೇಳೆಗೆ ಹಠಾತ್ ಹಿಂಸಾಚಾರಕ್ಕೆ ತಿರುಗಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ, ಸೊತ್ತುಗಳನ್ನು ಧ್ವಂಸಗೊಳಿಸಿದ್ದಾರೆ.
ಇಂದು ಫತೇಪುರ್ ಸಿಕಾರ್ ನ ಸುಭಾಶ್ ಶಾಲೆಯ ಮತಗಟ್ಟೆಯಲ್ಲಿ ಇದ್ದಕ್ಕಿದ್ದಂತೆಯೇ ಹಿಂಸಾಚಾರ ನಡೆದಿದ್ದು, ಉದ್ರಿಕ್ತ ಜನರು ಗುಂಪು ವಾಹನಗಳಿಗೆ ಬೆಂಕಿ ಹಚ್ಚಿದೆ ಎಂದು ಎಎನ್ಐ ವರದಿ ಮಾಡಿದೆ.
ಹಿಂಸಾಚಾರದಿಂದಾಗಿ ಕೆಲಕಾಲ ಮತದಾನ ಸ್ಥಗಿತಗೊಳಿಸಲಾಗಿತ್ತು. ಘಟನೆಯ ಮಾಹಿತಿ ಪಡೆದ ಹೆಚ್ಚುವರಿ ಭದ್ರತಾ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡರು. ಬಳಿಕ ಮತಾದಾನ ಮುಂದುವರೆದಿದೆ.
ದಿಢೀರ್ ಹಿಂಸಾಚಾರಕ್ಕೆ ಕಾರಣ ಇನ್ನು ತಿಳಿದುಬಂದಿಲ್ಲ.
ಈ ಹಠಾತ್ ಹಿಂಸೆ, ಗಲಭೆಯಿಂದಾಗಿ ಸುಮಾರು 30 ನಿಮಿಷಗಳ ಕಾಲ ಮತದಾನವನ್ನು ಅಮಾನತುಗೊಳಿಸಲಾಯಿತು.
ಹಿಂಸೆ ಸ್ಫೋಟಗೊಳ್ಳಲು ಕಾರಣವೇನೆಂದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಮತದಾನ ಮತ್ತೆ ಮುಂದುವರಿದಿದೆ. ಹೆಚ್ಚಿನ ಭದ್ರತಾ ಸಿಬಂದಿಗಳು ಇಲ್ಲಿ ಕರ್ತವ್ಯ ನಿರತರಾಗಿದ್ದಾರೆ.
ಮಧ್ಯಾಹ್ನ 1 ಗಂಟೆಯ ವರೆಗಿನ ಅವಧಿಯಲ್ಲಿ ಶೇ.41.53 ಮತದಾನ ನಡೆದಿರುವುದು ದಾಖಲಾಗಿದೆ.