ತೂತುಕುಡಿ ಅಭಿವೃದ್ಧಿಗೆ 100 ಕೋಟಿ ರು. ನೀಡಲು ಮುಂದಾದ ಸ್ಟೆರ್ಲೈಟ್

ವೇದಾಂತ್ ಗ್ರೂಪ್ ನ ಸ್ಟೆರ್ಲೈಟ್ ತಾಮ್ರ ಘಟಕ ತಮಿಳುನಾಡಿನ ತೂತುಕುಡಿಯ ಅಭಿವೃದ್ಧಿಗಾಗಿ 100 ಕೋಟಿ ರುಪಾಯಿ ನೀಡಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ವೇದಾಂತ್ ಗ್ರೂಪ್ ನ ಸ್ಟೆರ್ಲೈಟ್ ತಾಮ್ರ ಘಟಕ ತಮಿಳುನಾಡಿನ ತೂತುಕುಡಿಯ ಅಭಿವೃದ್ಧಿಗಾಗಿ 100 ಕೋಟಿ ರುಪಾಯಿ ನೀಡಲು ಮುಂದಾಗಿದ್ದು, ಆ ಹಣವನ್ನು ಶಾಲೆ ಹಾಗೂ ಆಸ್ಪತ್ರೆಗಳ ನಿರ್ಮಾಣಕ್ಕೆ ಮತ್ತು ಕುಡಿಯುವ ನೀರಿಗಾಗಿ ಬಳಸಿಕೊಳ್ಳಬಹುದು ಎಂದು ಹೇಳಿದೆ.
ತಮಿಳುನಾಡು ಸರ್ಕಾರ ಬಂದ್ ಮಾಡಿರುವ ತೂತಕುಡಿಯ ತನ್ನ ತಾಮ್ರ ಘಟಕ ಮರು ಆರಂಭಿಸುವುದಕ್ಕೆ ಅನುಮತಿ ಕೋರಿ ರಾಷ್ಟ್ರೀಯ ಹಸಿರು ಪೀಠ(ಎನ್ ಜಿಟಿ)ದ ಮೊರೆ ಹೋಗಿರುವ ಸ್ಟೆರ್ಲೈಟ್, ಎನ್ ಜಿಟಿ ಮುಂದೆ ಈ ಪ್ರಸ್ತಾವಿಟ್ಟಿದೆ. 
ತೂತುಕುಡಿ ಅಭಿವೃದ್ಧಿಗಾಗಿ 100 ಕೋಟಿ ರುಪಾಯಿ ಮೀಸಲಿಡುತ್ತೇವೆ. ತಾಮ್ರ ಘಟಕ ಆರಂಭಕ್ಕೆ ಅನುಮತಿ ನೀಡಿ ಎಂದು ಸ್ಟೆರ್ಲೈಟ್ ಪರ ವಕೀಲ ಸಿ ಆರ್ಯಮ್ ಸುಂದರಂ ಅವರು ಮನವಿ ಮಾಡಿದ್ದಾರೆ.
ತೂತುಕುಡಿ ಪರಿಸರಕ್ಕೆ ಸಂಬಂಧಿಸಿದಂತೆ ಕಂಪನಿ ತೆಗೆದುಕೊಳ್ಳಬಹುದಾದ ಪ್ರಮುಖ ಕ್ರಮಗಳನ್ನೊಳಗೊಂಡ ತಜ್ಞರ ಸಮಿತಿಯ ವರದಿಯನ್ನು ಸಂಪೂರ್ಣ ಒಪ್ಪಿಕೊಳ್ಳುವುದಾಗಿ ಸಹ ಸ್ಟೆರ್ಲೈಟ್ ತಿಳಿಸಿದೆ.
ಸ್ಟೆರ್ಲೈಟ್ ವಿರುದ್ಧ ತೂತ್ತುಕುಡಿ ನಿವಾಸಿಗಳು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 13 ಮಂದಿ ಮೃತಪಟ್ಟ ನಂತರ ತಮಿಳುನಾಡು ಸರ್ಕಾರ ಕಳೆದ ಮೇ 22 ರಂದು ಸ್ಟೆರ್ಲೈಟ್ ತಾಮ್ರ ಕಂಪನಿಗೆ ವಿದ್ಯುತ್ ಸ್ಥಗಿತಗೊಳಿಸುವ ಮೂಲಕ ಘಟಕವನ್ನು ಬಂದ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com