ಪ್ರತಿ ತಿಂಗಳೂ 3, 10 ವರ್ಷದಲ್ಲಿ 384 ಹುಲಿಗಳ ಹತ್ಯೆ: ಆರ್ ಟಿಐನಿಂದ ಕಳ್ಳಬೇಟೆಗಾರರ ಬಣ್ಣ ಬಯಲು

ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಒಟ್ಟಾರೆ 384 ಹುಲಿಗಳು ಕಳ್ಳಬೇಟೆಗಾಗಿ ಬಲಿಯಾಗಿದೆ ಎಂದು ಮಾಹಿತಿಯ ಹಕ್ಕು ಕಾಯ್ದೆ (ಆರ್ ಟಿಐ) ಮಾಹಿತಿ ಬಹಿರಂಗಪಡಿಸಿದೆ.
ಹುಲಿ
ಹುಲಿ
ನೊಯ್ಡಾ: ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಒಟ್ಟಾರೆ 384 ಹುಲಿಗಳು ಕಳ್ಳಬೇಟೆಗಾಗಿ ಬಲಿಯಾಗಿದೆ ಎಂದು ಮಾಹಿತಿಯ ಹಕ್ಕು ಕಾಯ್ದೆ (ಆರ್ ಟಿಐ) ಮಾಹಿತಿ ಬಹಿರಂಗಪಡಿಸಿದೆ. ಅಂದಾಜು ತಿಂಗಳಿಗೆ ಮೂರು ಹುಲಿಗಳನ್ನು ಕಳ್ಳಬೇಟೆ ಮೂಲಕ ಕೊಲ್ಲಲಾಗುತ್ತಿದೆ ಎಂದು ಈ ಅಂಕಿಅಂಶವು ವಿವರಿಸಿದೆ.
ಆರ್ ಟಿಐ ಕಾಯ್ದೆಯಡಿ 2008 ಮತ್ತು 2018 ರ ನಡುವೆ (ನವೆಂಬರ್ ತನಕ), ಎಷ್ಟು ಹುಲಿಗಳ ಹತ್ಯೆ ನಡೆದಿದೆ ಎನ್ನುವ ಕುರಿತು ಮಾಹಿತಿ ಕಲೆಹಾಕಲಾಗಿದ್ದು ಇದೇ ವೇಳೆ ಅಕ್ರಮ ಹುಲಿ ಬೇಟೆಯಾಡಿದ ಹಾಗೂ ಇದಕ್ಕೆ ಸಂಬಂಧಿಸಿದಂತೆ 961 ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಸಹ ತಿಳಿದುಬಂದಿದೆ.
ನೋಯ್ಡಾ ಮೂಲದ ವಕೀಲ ರಂಜನ್ ತೋಮರ್ ಸಲ್ಲಿಸಿದ ಆರ್ ಟಿಐ ಅರ್ಜಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ (ಡಬ್ಲ್ಯುಸಿಸಿಬಿ) ಉತ್ತರಿಸಿದ್ದು  ಕಳೆದ ಹತ್ತು ವರ್ಷಗಳಲ್ಲಿ ಕಳ್ಳ ಬೇಟೆಗಾರರಿಂದ ಕೊಲ್ಲಲ್ಪಟ್ಟ ಹುಲಿಗಳ ಸಂಖ್ಯೆ ಹಾಗೂ ಈ ಸಂಬಂಧ ಬಂಧಿಸಲ್ಪಟ್ಟವರ ಸಂಖ್ಯೆಯನ್ನು ಸಹ ಆರ್ ಟಿಐ ಕಾರ್ಯಕರ್ತರೂ ಆದ ತೋಮರ್ ಪಡೆದುಕೊಂಡಿದ್ದಾರೆ.
"ರಾಜ್ಯ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳಿಂದ ಪಡೆದ ಮಾಹಿತಿ, ಬ್ಯೂರೋದ ದಾಖಲೆಗಳಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಕಳೆದ 10 ವರ್ಷಗಳಲ್ಲಿ ಕಳ್ಳ ಬೇಟೆಗಾರರಿಂದ ಕೊಲ್ಲಲ್ಪಟ್ಟ ಒಟ್ಟು ಹುಲಿಗಳು 384 ಮತ್ತು ಹುಲಿ ಹತ್ಯೆ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟವರ ಸಂಖ್ಯೆ 961 ಆಗಿದೆ" 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com