ಬುಲಂದ್ ಶಹರ್ ಹಿಂಸಾಚಾರ: ಪೊಲೀಸ್ ಅಧಿಕಾರಿಗೆ ಗುಂಡು ಹಾರಿಸಿದ್ದು ಸೇನಾ ಯೋಧ?

ಇತ್ತೀಚೆಗೆ ನಡೆದ ಬುಲಂದ್ ಶಹರ್ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರಿಗೆ ಗುಂಡು ಹಾರಿಸಿದ್ದು ಯಾರು ಎಂಬ ಪ್ರಶ್ನೆ ಎದ್ದಿದೆ.
ಘಟನಾ ಸ್ಥಳ ಪರಿಶೀಲಿಸುತ್ತಿರುವ ಪೊಲೀಸರು
ಘಟನಾ ಸ್ಥಳ ಪರಿಶೀಲಿಸುತ್ತಿರುವ ಪೊಲೀಸರು
Updated on
ಲಕ್ನೋ: ಇತ್ತೀಚೆಗೆ ನಡೆದ ಬುಲಂದ್ ಶಹರ್ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರಿಗೆ ಗುಂಡು ಹಾರಿಸಿದ್ದು ಯಾರು ಎಂಬ ತನಿಖಾ ತಂಡದ ಅನುಮಾನಕ್ಕೆ ಸುಳಿವು ಸಿಕ್ಕಿದೆ.
ಉನ್ನತ ಮೂಲಗಳ ಮಾಹಿತಿ ಪ್ರಕಾರ, ತನಿಖಾ ತಂಡ ಸುಮಾರು 203 ವಿಡಿಯೋಗಳನ್ನು ವೀಕ್ಷಿಸಿದ್ದು, ಸೇನಾ ಯೋಧನೊಬ್ಬನ ಮೇಲೆ ಶಂಕೆ ವ್ಯಕ್ತ ಪಡಿಸಿದೆ.
ಸದ್ಯ ಕಾರ್ಗಿಲ್ ಗೆ ಪೋಸ್ಟಿಂಗ್ ಆಗಿರುವ ಸೇನಾ ಯೋಧ ಜೀತು ಅಂದು ಘಟನೆ ನಡೆದ ಸ್ಥಳದಲ್ಲಿದ್ದರು. ಗೋಹತ್ಯೆ ಸಂಬಂದ ನಡೆದ ಗಲಭೆಯಲ್ಲಿ ಇಬ್ಬರು ಸಾವನ್ನಪ್ಪಿದ ಸ್ಥಳದಲ್ಲಿ ಜೀತು ಇದ್ದಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ತನಿಖಾ ತಂಡಕ್ಕೆ ಸಿಕ್ಕಿರುವ ಡಿಜಿಟಲ್ ಪುರಾವೆಗಳ ಪ್ರಕಾರ ಜೀತು ಗುಂಡು ಹಾರಿಸಿದ್ದಾನೆ ಎಂಬುದಾಗಿ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಪೊಲೀಸ್ ತಂಡ ಹೆಚ್ಚಿನ ವಿಚಾರಣೆಗಾಗಿ ಜಮ್ಮು ಕಾಶ್ಮೀರಕ್ಕೆ ತೆರಳಿದೆ, ಮೀರತ್ ವಿಭಾಗದ ಎಡಿಜಿ ಪ್ರಶಾಂತ್ ಕುಮಾರ್ ಘಟನೆಯಲ್ಲಿ ಜೀತು ಕೈವಾಡವಿದೆ ಎಂದು ಹೇಳಿದ್ದಾರೆ, ಪ್ರಕರಣ ಸಂಬಂಧ 27 ಮಂದಿ ವಿರುದ್ಧ ಎಫ್ಐ ಆರ್ ದಾಖಲಿಸಿದ್ದು, ಜೀತು ಹೆಸರು ಮೊದಲಿದೆ.
ಆತನ ಕಮಾಂಡರ್ ಜೊತೆ ಸಂಪರ್ಕದಲ್ಲಿರುವುದಾಗಿ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಘಟನೆಗೂ ನನ್ನ ಮಗನಿಗೂ ಸಂಬಂಧವಿಲ್ಲ ಎಂದು ಜೀತು ತಾಯಿ, ರತನ್ ಕೌರ್ ಹೇಳಿದ್ದಾರೆ. ನನ್ನ ಮಗನಿಗೆ ಕಾರ್ಗಿಲ್ ಗೆ ಪೋಸ್ಟಿಂಗ್ ಆಗಿತ್ತು, ಹೀಗಾಗಿ ಆತ ಪ್ರಕರಣ ನಡೆದ ದಿನ ಇರಲಿಲ್ಲ ಎಂದು ಹೇಳಿದ್ದಾರೆ, ಆದರೆ ಆತ ಅಂದು ಘಟನಾ ಸ್ಥಳದಲ್ಲಿ ಇದ್ದ, ಅಂದು ಸಂಜೆಯೇ ಆತ ಕಾಶ್ಮೀರಕ್ಕೆ ತೆರಳಿದ ಎಂದು ಆತನ ಸಂಬಂಧಿಗಳು ಸ್ಪಷ್ಟ ಪಡಿಸಿದ್ದಾರೆ., ಜೀತು ಸಂಬಂಧಿಯೊಬ್ಬನ ವಿರುದ್ಧವೂ ಎಫ್ ಐ ಆರ್ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com