2 ಸಾವಿರಕ್ಕೂ ಹೆಚ್ಚಿನ ಮುಸ್ಲಿಂ ಮಹಿಳೆಯರು ಪುರುಷರ ಜೊತೆ ಇಲ್ಲದೆ ಹಜ್ ಯಾತ್ರೆ ಸಾಧ್ಯತೆ- ನಖ್ವೀ

ಮುಂದಿನ ವರ್ಷ ಪುರುಷರ ಜೊತೆ ಇಲ್ಲದೆ ದೊಡ್ಡ ಸಂಖ್ಯೆಯ ಮುಸ್ಲಿಂ ಮಹಿಳೆಯರು ಹಜ್ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇರುವುದಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವೀ ಹೇಳಿದ್ದಾರೆ.
ಮುಕ್ತಾರ್ ಅಬ್ಬಾಸ್ ನಖ್ವೀ
ಮುಕ್ತಾರ್ ಅಬ್ಬಾಸ್ ನಖ್ವೀ

ನವದಹೆಲಿ: ಮುಂದಿನ ವರ್ಷ ಪುರುಷರ ಜೊತೆ ಇಲ್ಲದೆ   ದೊಡ್ಡ ಸಂಖ್ಯೆಯ ಮುಸ್ಲಿಂ ಮಹಿಳೆಯರು ಹಜ್ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇರುವುದಾಗಿ  ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವೀ ಹೇಳಿದ್ದಾರೆ.

ಹಜ್   ಸಹಯೋಗದ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಮುಖ್ತಾರ್ ಅಬ್ಬಾಸ್ ನಖ್ವೀ,   2019ರ ಹಜ್  ಯಾತ್ರೆಗಾಗಿ ಈವರೆಗೂ ಭಾರತದ ಹಜ್ ಸಮಿತಿ 2 ಲಕ್ಷದ 23 ಸಾವಿರ ಅರ್ಜಿಗಳನ್ನು ಸ್ವೀಕರಿಸಿದೆ ಎಂದು ತಿಳಿಸಿದರು.

ಸ್ವೀಕರಿಸಲಾಗಿರುವ ಒಟ್ಟಾರೇ 2 ಲಕ್ಷದ  23 ಸಾವಿರ ಅರ್ಜಿಗಳಲ್ಲಿ ಶೇ. 47 ರಷ್ಟು ಮಹಿಳೆಯರಿದ್ದಾರೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯಿಂದ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ನವೆಂಬರ್ 7 ರಿಂದ  ಅರ್ಜಿಯನ್ನು ಸ್ವೀಕರಿಸಲಾಗುತ್ತಿದ್ದು, ಡಿಸೆಂಬರ್ 12 ಕಡೆಯ ದಿನವಾಗಿದೆ.

 ಪುರುಷರ ಜೊತೆಯಲ್ಲಿಯೇ ಮುಸ್ಲಿಂ ಮಹಿಳೆಯರು ಹಜ್ ಯಾತ್ರೆ ಕೈಗೊಳ್ಳಬೇಕು ಎಂಬ ನಿಯಮವನ್ನು ಕೇಂದ್ರಸರ್ಕಾರ ನಿರ್ಬಂಧಿಸಿದ ಮೇಲೆ  ಹೆಚ್ಚಿನ ಸಂಖ್ಯೆಯ ಮಹಿಳೆಯರು ಪುರುಷರ ಜೊತೆ ಇಲ್ಲದೆ ಹಜ್ ಯಾತ್ರೆಗೆ ತೆರಳಲು ಅರ್ಜಿ ಸಲ್ಲಿಸಿದ್ದು, ಇದೇ ಮೊದಲ ಬಾರಿಗೆ ಪುರುಷರ ಜೊತೆ ಇಲ್ಲದೆ ಮುಸ್ಲಿಂ ಮಹಿಳೆಯರು ಹಜ್  ಯಾತ್ರೆ ತೆರಳುವ ಸಾಧ್ಯತೆ ಇರುವುದಾಗಿ ಅವರು ಹೇಳಿದ್ದಾರೆ.

ಲಾಟರಿ  ವ್ಯವಸ್ಥೆಯಿಂದ ವಿನಾಯಿತಿ ನೀಡಲಾಗಿದ್ದು,  ಭಾರತೀಯ ಮಹಿಳಾ ಯಾತ್ರಾರ್ಥಿಗಳ ನೆರವಿಗಾಗಿ 100 ಕ್ಕೂ ಹೆಚ್ಚು ಮಹಿಳಾ ಹಜ್ ಪ್ರತಿನಿಧಿಗಳನ್ನು ನಿಯೋಜಿಸಲಾಗಿದೆ.  ಸ್ವಾತಂತ್ರ್ಯ ನಂತರ  2018ರಲ್ಲಿ ದಾಖಲೆ ಪ್ರಮಾಣದಲ್ಲಿ 1, 75, 025  ಯಾವುದೇ ಸಬ್ಸಿಡಿ ಇಲ್ಲದೆ  ಹಜ್ ಯಾತ್ರೆ ಕೈಗೊಂಡಿರುವುದಾಗಿ  ಅವರು ತಿಳಿಸಿದ್ದಾರೆ.

2019ರ ಯಾತ್ರಾ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ಮಾಡಲಾಗುತ್ತಿದೆ. 1.36. 000 ಆನ್ ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆನ್ ಲೈನ್ ಪೋರ್ಟಲ್ ಗಾಗಿ ಪಿಟಿಓ- ಖಾಸಗಿ ಪ್ರವಾಸ ಅಪರೇಟರ್ಸ್  ಈಗಾಗಲೇ ಕಾರ್ಯಾರಂಭಿಸಿರುವುದಾಗಿ ನಖ್ವೀ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com