ಬುರೇ ದಿನ್ ಮುಗಿಯಲಿದೆ, ರಾಹುಲ್ ಗಾಂಧಿ ಹೊಸ ಬಾಹುಬಲಿ: ಪಂಚ ಫಲಿತಾಂಶಕ್ಕೆ ಸಿಧು ವ್ಯಾಖ್ಯಾನ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶವನ್ನಾಳುವ ಕಾಲ ಸನ್ನಿಹಿತವಾಗಿದೆ, ಬಿಜೆಪಿ ಅವನತಿ ಪ್ರಾರಂಭವಾಗಿದೆ. ರಾಹುಲ್ ಹೊಸ ಬಾಹುಬಲಿಯಾಗಿ ಬರಲಿದ್ದಾರೆ ಎಂದು ಪಂಜಾಬ್ ಸಚಿವ.....
ಸಿಧು ಜತೆ ರಾಹುಲ್ ಗಾಂಧಿ
ಸಿಧು ಜತೆ ರಾಹುಲ್ ಗಾಂಧಿ
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶವನ್ನಾಳುವ ಕಾಲ ಸನ್ನಿಹಿತವಾಗಿದೆ, ಬಿಜೆಪಿ ಅವನತಿ ಪ್ರಾರಂಭವಾಗಿದೆ. ರಾಹುಲ್ ಹೊಸ ಬಾಹುಬಲಿ ಎಂದು ಪಂಜಾಬ್ ಸಚಿವ, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ ಸೇರಿ ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಕುರಿತಂತೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.\
"ಪ್ರಜಾಪ್ರಭುತ್ವದಲ್ಲಿ ನಿರ್ಧಾರ ತೆಗೆದುಕೊಳ್ಳಲು ಜನರಿಗೆ ಅಧಿಕಾರವಿದೆ, ಅವರ ಧ್ವನಿಯು ದೇವರ ಧ್ವನಿಯಾಗಿರಲಿದೆ. ಈಗ ಜನರ ದನಿಯು ಬಿಜೆಪಿಗೆ ಭೀತಿಯನ್ನುಂಟು ಮಾಡಿದೆ. ರಾಹುಲ್ ಗಾಂಧಿ ಮತ್ತೊಬ್ಬ ಹೊಸ ಬಾಹುಬಲಿ ಆಗಿದ್ದಾರೆ" ಸಿಧು ಹೇಳಿದರು.
ಬುರೇ ದಿನ್ (ಕೆಟ್ಟ ದಿನ) ಕಳೆಯಲಿದೆ, ರಾಹುಲ್ ಆಗಮನವಾಗಲಿದೆ.ಸಹನೆ ಹಾಗೂ ಪರಿಶ್ರಮದ ಫಲ ಸಿಹಿಯಾಗಿರಲಿದೆ.ರಾಹುಲ್ ನಾಯಕತ್ವದಲ್ಲಿ ಸಹ ನಾವೀಗ ಇದೇ ಫಲ ಕಾಣುತ್ತೇವೆ 2019ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಿ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ ಎಂದು ಸಿಧು ಹೇಳಿದರು.
ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲಸಮಯವಿರುವಾಗ ಸಿಧು 2017 ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು.
ಬಿಜೆಪಿಯಲ್ಲಿನ ಅಹಂಕಾರದಿಂದಾಗಿಯೇ ಅವರು ಈ ಐದು ರಾಜ್ಯಫ಼್ಗಳ ಚುನಾವಣೆಯಲ್ಲಿ ಸೋಲಿನ ಕಹಿ ನೋಡಿದ್ದಾರೆ ಎಂದು ಸಿಧು ಅಭಿಪ್ರಾಯ ಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com