ತೆಲಂಗಾಣ: ಗಾಂಧಿ ಕುಟುಂಬದ ನೀಲಿಗಣ್ಣಿನ ಹುಡುಗ ಉತ್ತಮ್ ಕುಮಾರ್ ರೆಡ್ಡಿ ಸಿಎಂ ಅಭ್ಯರ್ಥಿ?

ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಅಭ್ಯರ್ಥಿ ನಲಮಾಡ ಉತ್ತಮ್ ಕುಮಾರ್ ರೆಡ್ಡಿ ಎಂದು ..
ಉತ್ತಮ್ ಕುಮಾರ್ ರೆಡ್ಡಿ
ಉತ್ತಮ್ ಕುಮಾರ್ ರೆಡ್ಡಿ
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಅಭ್ಯರ್ಥಿ ನಲಮಾಡ ಉತ್ತಮ್ ಕುಮಾರ್ ರೆಡ್ಡಿ  ಎಂದು ಕಾಂಗ್ರೆಸ್ ಮುಖಂಡರು ಮಾತನಾಡಿಕೊಳ್ಳುತ್ತಿದ್ದಾರೆ.
ಸದ್ಯ ತೆಲಂಗಾಣ ಕಾಂಗ್ರೆಸ್ ಮತ ಎಣಿಕೆ ಕೇಂದ್ರಗಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಸೋಮವಾರ ಕಾಂಗ್ರೆಸ್ ಹೈಕಮಾಂಡ್ ರೆಡ್ಡಿಗೆ ದೆಹಲಿಗೆ ಬುಲಾವ್ ನೀಡಿತ್ತು.  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಮತ್ತು ಅಶೋಕ್ ಗೆಹ್ಲೋಟ್ ಜೊತೆ ಚರ್ಚೆ ನಡೆಸಿದರು.
ಆದರೆ ಮಾತುಕತೆ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ, ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾದರೇ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ರಾಹುಲ್ ಗಾಂಧಿ ರೆಡ್ಡಿ ಪರವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉತ್ತಮ್ ಕುಮಾರ್ ರೆಡ್ಡಿ ಗಾಂಧಿ ಕುಟುಂಬದ ನೀಲಿಗಣ್ಣಿನ ಹುಡುಗ ಎಂದೇ ಪ್ರಸಿದ್ದಿಯಾಗಿದ್ದಾರೆ.  ಒಂದು ವೇಳೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಯಶಸ್ಸು ಗಳಿಸಿದರೇ  ಉತ್ತಮ್ ಕುಮಾರ್  ತೆಲಂಗಾಣ ಕಾಂಗ್ರೆಸ್ ಹೀರೋ  ಆಗಲಿದ್ದಾರೆ, 4 ಬಾರಿ ಹುಜೂರ್ ನಗರದಿಂದ ಶಾಸಕರಾಗಿ ಆಯ್ಕೆಯಾಗಿರುವ ರೆಡ್ಡಿ ಮೊದಲಿಗೆ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದರು. 
ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗಿ ಕೆಲಸ ಮಾಡಿದ್ದಾರೆ. ಅವಿಭಜಿತ ಆಂಧ್ರಪ್ರದೇಶದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ, ಈ ಬಾರಿಯ ಚುನಾವಣೆಯಲ್ಲಿ ಗೆದ್ದರೇ ಸತತ ಐದನೇ ಬಾರಿ ವಿಜಯ ಸಾಧಿಸಿದಂತಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com