ಹೊಸ ನಿಯಮ: ಪ್ಯಾನ್ ಕಾರ್ಡ್ ಪಡೆಯಲು ತಂದೆ ಹೆಸರು ಕಡ್ಡಾಯವಲ್ಲ

ಪ್ಯಾನ್ ಕಾರ್ಡ್ ನಲ್ಲಿ ತಂದೆ ಹೆಸರು ಕಡ್ಡಾಯವಾಗಿ ನಮೂದಿಸಬೇಕು ಎಂಬ ನಿಯಮವನ್ನು ಆದಾಯ ತೆರಿಗೆ ಇಲಾಖೆ ಕೈಬಿಟ್ಟಿದ್ದು, ಈ ಸಂಬಂಧ ನಿಯಮ 114ಕ್ಕೆ ತಿದ್ದುಪಡಿ ತರಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪ್ಯಾನ್ ಕಾರ್ಡ್ ನಲ್ಲಿ ತಂದೆ ಹೆಸರು ಕಡ್ಡಾಯವಾಗಿ ನಮೂದಿಸಬೇಕು ಎಂಬ ನಿಯಮವನ್ನು ಆದಾಯ ತೆರಿಗೆ ಇಲಾಖೆ ಕೈಬಿಟ್ಟಿದ್ದು, ಈ ಸಂಬಂಧ ನಿಯಮ 114ಕ್ಕೆ ತಿದ್ದುಪಡಿ ತರಲಾಗಿದೆ.
ಡಿಸೆಂಬರ್ 5ರಿಂದ ಹೊಸ ನಿಯಮ ಜಾರಿಗೆ ಬಂದಿದ್ದು, ಸಿಂಗಲ್ ಪೇರೆಂಟ್ ಅಥವಾ ತಾಯಿಯ ಬಳಿ ಬೆಳೆದವರು ಇನ್ನುಮುಂದೆ ತಂದೆಯ ಹೆಸರನ್ನು ಪ್ಯಾನ್ ಕಾರ್ಡ್ ನಲ್ಲಿ ನಮೂದಿಸಬೇಕಾಗಿಲ್ಲ.
ಪ್ಯಾನ್ ಅರ್ಜಿಯಲ್ಲಿ ತಂದೆಯ ಹೆಸರನ್ನು ನಮೂದಿಸುವ ನಿಯಮಗಳಲ್ಲಿ ಸಡಿಲಿಕೆ ನೀಡಬೇಕು ಎಂಬ ಹಲವಾರು ಮನವಿಗಳು ಬರುತ್ತಿರುವುದು ಹಾಗೂ ತಂದೆ ಇಲ್ಲದೆ ಒಬ್ಬರೆ ಪೋಷಕರಿವವರು ಇದರಿಂದ ಬಹಳಷ್ಟು ಕಿರಿಕಿರಿ ಅನುಭವಿಸುವಂತಾಗಿರುವ ಹಿನ್ನೆಲೆಯಲ್ಲಿ ಈ ತಿದ್ದುಪಡಿ ತರಲಾಗಿದೆ.
ಸದ್ಯ ಜಾರಿಯಲ್ಲಿರುವ ನಿಯಮದ ಪ್ರಕಾರ ಪ್ಯಾನ್ ಕಾರ್ಡ್ಗೆ ತಂದೆಯ ಹೆಸರನ್ನು ನೀಡುವುದು ಕಡ್ಡಾಯವಾಗಿದೆ. ಹಾಗು ಆದಾಯ ತೆರಿಗೆ ವಿವರಗಳನ್ನು ಘೋಷಿಸುವುದು ಕಡ್ಡಾಯವಾಗಿದೆ. ಸಿಂಗಲ್ ಪೇರೆಂಟ್ ಬಳಿಯಲ್ಲಿ ಬೆಳೆದವರಿಗೆ ಪ್ಯಾನ್ಕಾರ್ಡ್ ಗೆ ಅರ್ಜಿ ಸಲ್ಲಿಸೋಕೆ ಇರಿಸುಮುರಿಸು ಉಂಟಾಗ್ತಿತ್ತು. ಈಗ ಈ ನಿಯಮದಲ್ಲಿ ವಿನಾಯಿತಿ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com