ಮಿಜೋರಾಂ ಮುಖ್ಯಮಂತ್ರಿಯಾಗಿ ಝೋರ್ಮತಂಗಾ ಶನಿವಾರ ಅಧಿಕಾರ ಸ್ವೀಕಾರ

ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಎಂಎನ್ ಎಫ್ ಅಧ್ಯಕ್ಷ ಝೋರ್ಮತಂಗಾ ಶನಿವಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ .
ಝೋರ್ಮತಂಗಾ
ಝೋರ್ಮತಂಗಾ

ಐಜ್ವಾಲ್ : ಮಿಜೋರಾಂ ವಿಧಾನಸಭಾ  ಚುನಾವಣೆಯಲ್ಲಿ  ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಎಂಎನ್ ಎಫ್ ಅಧ್ಯಕ್ಷ ಝೋರ್ಮತಂಗಾ ಶನಿವಾರ  ಮುಖ್ಯಮಂತ್ರಿಯಾಗಿ  ಅಧಿಕಾರ ಸ್ವೀಕರಿಸಲಿದ್ದಾರೆ .

ರಾಜಭವನದಲ್ಲಿ ಶನಿವಾರ ಮಧ್ಯಾಹ್ನ ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣಾ ಆಯೋಗದಿಂದ ಅಧಿಕೃತ ಫಲಿತಾಂಶ ಪಡೆದ ನಂತರ ರಾಜ್ಯಪಾಲ ಕುಮ್ಮನ್ ರಾಜಶೇಖರನ್ ಸಂಪ್ರದಾಯಿಕವಾಗಿ ಝೋರ್ಮತಂಗಾ  ಅವರನ್ನು ಅಧಿಕಾರ ರಚಿಸುವಂತೆ ಆಹ್ವಾನಿಸಿದ್ದಾರೆ ಎಂದು ರಾಜಭವನದ ಮೂಲಗಳು ಹೇಳಿವೆ.

ಅಂದು ಏಳನೇ  ವಿಧಾನಸಭೆಯನ್ನು ರಾಜ್ಯಪಾಲರು ವಜಾಗೊಳಿಸಲಿದ್ದು, ಸಂವಿಧಾನದ ಪ್ರಕಾರ 8 ನೇ ಆಸೆಂಬ್ಲಿಗೆ ದಾರಿ ಮಾಡಿಕೊಡಲಿದ್ದಾರೆ.  ಎಲ್ಲಾ 12 ಸಚಿವರು ಡಿಸೆಂಬರ್ 15 ರಂದೇ  ಅಧಿಕಾರ ಸ್ವೀಕರಿಸಲಿದ್ದಾರೆಯೇ ಎಂಬ  ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

40 ಸದಸ್ಯ ಬಲದ ಮಿಜೋರಾಂನಲ್ಲಿ ದಶಕದ ಬಳಿಕ  ಎನ್ ಎನ್ ಎಫ್ 26 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಹಿಡಿಯುತ್ತಿದೆ.  ನವೆಂಬರ್ 28 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್ 5 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com