ಪ್ರಧಾನಿ ಮೋದಿ ನಾಯಕತ್ವದ ಬಗ್ಗೆ ಅನುಮಾನ ಬೇಡ- ರಾಮ್ ದೇವ್

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಅವರ ನೀತಿಯ ಬಗ್ಗೆ ಯಾರೂ ಅನುಮಾನ ವ್ಯಕ್ತಪಡಿಸಬಾರದು ಎಂದು ಯೋಗ ಗುರು ರಾಮ್ ದೇವ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಅವರ ನೀತಿಯ ಬಗ್ಗೆ  ಯಾರೂ ಅನುಮಾನ ವ್ಯಕ್ತಪಡಿಸಬಾರದು ಎಂದು ಯೋಗ ಗುರು ರಾಮ್ ದೇವ್ ಹೇಳಿದ್ದಾರೆ.

ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಭಾರತ ಆರ್ಥಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ  ರಾಮ್ ದೇವ್,  ನರೇಂದ್ರ ಮೋದಿ ಬೇರೆಯವರ ರೀತಿ ಮತ ಬ್ಯಾಂಕ್ ರಾಜಕೀಯ ಮಾಡುವುದಿಲ್ಲ ಎಂದಿದ್ದಾರೆ.

ನರೇಂದ್ರ ಮೋದಿ ದೇಶ ಕಟ್ಟುವ  100ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರೂ ಎಂದಿಗೂ ವೋಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ  ಎಂದು ಪ್ರಧಾನಿಯನ್ನು ರಾಮ್ ದೇವ್ ಕೊಂಡಾಡಿದ್ದಾರೆ.

ನೋಟ್ ಅಮಾನ್ಯತೆ ನಂತರ ಎಲ್ಲಾ ಹಣ ಈಗ ಸಮವಾಗಿದೆ.ಆದರೆ. ಈ ಹಣವನ್ನು ಹೇಗೆ ಬಳಸಬೇಕು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಹಣವನ್ನು ಬಳಸಿಕೊಳ್ಳಬೇಕು ಎಂದಿರುವ ರಾಮ್ ದೇವ್, ತಾವೂ ಪ್ರೋತ್ಸಾಹಿಸುತ್ತಿರುವ ಪಂತಂಜಲಿ ಸಮೂಹ 2025ರೊಳಗೆ ವಿಶ್ವದ ಅತ್ಯಂತ ದೊಡ್ಡದಾದ ಎಫ್ ಎಂಸಿಜಿ ಕಂಪನಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com