ನವದೆಹಲಿ: ಇಂಗ್ಲೀಷ್ ಭಾಷೆಯ ಹೆಸರಾಂತ ಕಾದಂಬರಿಕಾರ ಅಮಿತಾವ್ ಘೋಷ್ ಗೆ ಈ ಸಾಲಿನ ಜ್ಞಾನ ಪೀಠ ಪ್ರಶಸ್ತಿ ಒಲಿದುಬಂದಿದೆ.
ಸಾಹಿತ್ಯ ಕ್ಷೇತ್ರದ ಕೊಡುಗೆಯನ್ನು ಗುರುತಿಸಿ ಡಿ.14 ರಂದು ಜ್ಞಾನಪೀಠ ಪ್ರಶಸ್ತಿ ಸಮಿತಿ ಅವಿರೋಧವಾಗಿ ಅಮಿತಾವ್ ಘೋಷ್ ಗೆ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಿದೆ. 54 ನೇ ಜ್ಞಾನಪೀಠವನ್ನು ಪಡೆಯುತ್ತಿರುವ ಅಮಿತಾವ್ ಘೋಷ್ ಪದ್ಮಶ್ರೀ ಪುರಸ್ಕೃತರೂ ಆಗಿದ್ದಾರೆ.
ದಿ ಸರ್ಕಲ್ ಆಫ್ ರೀಸನ್, ದಿ ಕಲ್ಕತ್ತಾ ಕ್ರೋಮೋಸೋಮ್, ರಿವರ್ ಆಫ್ ಸ್ಮೋಕ್ ಮುಂತಾದ ಖ್ಯಾತ ಕಾದಂಬರಿಗಳನ್ನು ಅಮಿತಾವ್ ಘೋಷ್ ರಚಿಸಿದ್ದಾರೆ.
ಸೀ ಆಫ್ ಪೊಪ್ಪೀಸ್, ರಿವರ್ ಆಫ್ ಸ್ಮೋಕ್ ಕೃತಿಗಳು ಅನುಕ್ರಮವಾಗಿ 2008, 2012 ರಲ್ಲಿ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದವು.