ರಾಫೆಲ್ ಪ್ರಕರಣದಂತೆ ಸುಪ್ರೀಂನಿಂದ ಬಾಬ್ರಿ ಮಸೀದಿ ತೀರ್ಪನ್ನು ಬಿಜೆಪಿ ನಿರೀಕ್ಷಿಸುತ್ತಿದೆ- ಮೆಹಬೂಬ

ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಪ್ತಿ, ಬಾಬಿ ಮಸೀದಿ ವಿವಾದದಲ್ಲೂ ಇದೇ ರೀತಿಯ ತೀರ್ಪಿಗೆ ಬಿಜೆಪಿ ಕಾಯುತ್ತಿದೆ ಎಂದು ಹೇಳಿದ್ದಾರೆ.
ಮೆಹಬೂಬಾ
ಮೆಹಬೂಬಾ

ಜಮ್ಮು-ಕಾಶ್ಮೀರ: ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಪ್ತಿ, ಬಾಬಿ ಮಸೀದಿ ವಿವಾದದಲ್ಲೂ ಇದೇ ರೀತಿಯ ತೀರ್ಪಿಗೆ ಬಿಜೆಪಿ ಕಾಯುತ್ತಿದೆ ಎಂದು ಹೇಳಿದ್ದಾರೆ.

ರಾಫೆಲ್  ಒಪ್ಪಂದದಲ್ಲಿ  ಸುಪ್ರೀಂಕೋರ್ಟ್  ತೀರ್ಪನ್ನು ಸ್ವಾಗತಿಸಿರುವ ಬಿಜೆಪಿ  ಇದೇ ರೀತಿಯಲ್ಲಿ ಬಾಬ್ರಿ ಮಸೀದಿ ತೀರ್ಪನ್ನು ನಿರೀಕ್ಷಿಸುತ್ತಿದೆ ಎಂದಿರುವ ಮೆಹಬೂಬಾ, ಸುಪ್ರೀಂಕೋರ್ಟ್  ಬಗ್ಗೆ ತಮ್ಮಗೆ ಅಪಾರ ಗೌರವ ಇರುವುದಾಗಿಯೂ  ತಿಳಿಸಿದ್ದಾರೆ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತರುವಂತೆ ಕೇಂದ್ರಸರ್ಕಾರದ ಮೇಲೆ ಆರ್ ಎಸ್ ಎಸ್  ಒತ್ತಡ ಹಾಕುತ್ತಿದೆ.  ರಾಮ ಮಂದಿರ ಭೂ ವಿವಾದದ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ವಿಳಂಬವಾಗುತ್ತಿರುವುದು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು  ರಾಷ್ಟ್ರೀಯ ಸ್ವಯಂ ಸಂಘ ಹೇಳಿದೆ.

ಅನೇಕ ಬಿಜೆಪಿ ನಾಯಕರು  ಕೂಡಾ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಬೆಂಬಲ ನೀಡಿದ್ದಾರೆ.  

ಇತ್ತೀಚಿಗೆ ರಾಜಸ್ತಾನ, ಮಧ್ಯಪ್ರದೇಶ, ಹಾಗೂ ಛತ್ತೀಸ್ ಗಡ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು  ಮೆಹಬೂಬಾ ಹೊಗಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com