ಮೋದಿ ವಿದೇಶ ಪ್ರವಾಸ, ಜಾಹೀರಾತಿಗಾಗಿ 7200 ಕೋಟಿ ರು. ಖರ್ಚು

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನಾಲ್ಕುವರೆ ವರ್ಷಗಳಲ್ಲಿ ತಮ್ಮ ವಿದೇಶ ಪ್ರವಾಸ ಹಾಗೂ ಜಾಹೀರಾತಿಗಾಗಿ ಬರೋಬ್ಬರಿ....
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನಾಲ್ಕುವರೆ ವರ್ಷಗಳಲ್ಲಿ ತಮ್ಮ ವಿದೇಶ ಪ್ರವಾಸ ಹಾಗೂ ಜಾಹೀರಾತಿಗಾಗಿ ಬರೋಬ್ಬರಿ 7200 ಕೋಟಿ ರುಪಾಯಿ ಖರ್ಚು ಮಾಡಿದ್ದಾರೆ ಎಂದು ಸ್ವತಃ ಕೇಂದ್ರ ಸರ್ಕಾರ ಶುಕ್ರವಾರ ಬಹಿರಂಗಪಡಿಸಿದೆ.
ಮೋದಿ ಅವರು 2014ರಲ್ಲಿ ಪ್ರಧಾನಿಯಾದ ನಂತರ ಇದುವರೆಗೆ 84 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದು, ಅದಕ್ಕಾಗಿ 2 ಸಾವಿರ ಕೋಟಿ ರುಪಾಯಿ ಖರ್ಚು ಮಾಡಿದ್ದಾರೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರು ಇಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಏರ್ ಕ್ರಾಫ್ಟ್ ನಿರ್ವಹಣೆಗೆಂದೇ 1583.18 ಕೋಟಿ, ಚಾರ್ಟರ್ಡ್ ಫ್ಲೈಟ್ಸ್‌ಗಳಿಗಾಗಿ 429.28 ಕೋಟಿ, ಸುರಕ್ಷಿತ ಹಾಟ್‌ಲೈನ್ ಸೌಲಭ್ಯಕ್ಕಾಗಿ 9.12 ಕೋಟಿ ರೂ. [2014-2017] ಖರ್ಚು ಮಾಡಲಾಗಿದೆ ಎಂದು ವಿ.ಕೆ.ಸಿಂಗ್ ಅವರು ಲೆಕ್ಕ ನೀಡಿದ್ದಾರೆ.  
ಇನ್ನು ಮೋದಿ ಅವರ ಯೋಜನೆಗಳು ಹಾಗೂ ಸಾಧನೆಗಳ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರವು 2014–15ರಿಂದ ಇದುವರೆಗೆ ಮಾಧ್ಯಮ ಜಾಹೀರಾತಿಗಾಗಿ 5200 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ರಾಠೋಡ್ ಅವರು ಹೇಳಿದ್ದಾರೆ.
ಮೋದಿ ಜಾಹೀರಾತಿಗಾಗಿ 2014-15ರಲ್ಲಿ 979 ಕೋಟಿ, 2015-16ರಲ್ಲಿ 1,160 ಕೋಟಿ, 2016-17ರಲ್ಲಿ 1,264 ಕೋಟಿ, 2017-18ರಲ್ಲಿ 1,313 ಕೋಟಿ ಹಾಗೂ 2018-19ರಲ್ಲಿ 527 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ ಎಂದು ರಾಠೋಡ್ ಅವರು ಲೋಕಸಭೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com