ಎನ್ ಆರ್ ಸಿ ದೋಷಯುಕ್ತ: ಭಾರತವನ್ನು ಮುಸ್ಲಿಂ ರಾಷ್ಟ್ರವಾಗಿಸಲು ಯಾರೂ ಪ್ರಯತ್ನಿಸಬಾರದು- ಜಡ್ಜ್

ಭಾರತವನ್ನು ಮತ್ತೊಂದು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಯಾರೂ ಪ್ರಯತ್ನಿಸಬಾರದು ಎಂದು ಮೇಘಾಲಯ ಹೈಕೋರ್ಟ್ ನ್ಯಾಯಾಧೀಶ ಎಸ್ ಆರ್ ಸೇನ್ ಅಭಿಪ್ರಾಯಪಟ್ಟಿದ್ದು, ಎಂದು ಹೇಳಿದ್ದಾರೆ.
ನ್ಯಾಯಾಧೀಶ ಎಸ್ ಆರ್ ಸೇನ್
ನ್ಯಾಯಾಧೀಶ ಎಸ್ ಆರ್ ಸೇನ್

ಶಿಲ್ಲಾಂಗ್ : ಅನೇಕ ವಿದೇಶಿಯರನ್ನು ದೇಶವಾಸಿಗಳಾಗಿಸಿರುವ ಎನ್ ಆರ್ ಸಿ ಪಟ್ಟಿ ದೋಷಯುಕ್ತದಿಂದ ಕೂಡಿದ್ದು, ಭಾರತವನ್ನು ಮತ್ತೊಂದು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಯಾರೂ ಪ್ರಯತ್ನಿಸಬಾರದು ಎಂದು ಮೇಘಾಲಯ ಹೈಕೋರ್ಟ್ ನ್ಯಾಯಾಧೀಶ ಎಸ್ ಆರ್ ಸೇನ್ ಹೇಳಿದ್ದಾರೆ.

ಮೇಘಾಲಯ ಸರ್ಕಾರ ನೀಡಿದ ನಿವಾಸ ಪ್ರಮಾಣವನ್ನು ನಿರಾಕರಿಸಿದ ವ್ಯಕ್ತಿಯೊಬ್ಬರ ಅರ್ಜಿ ವಿಚಾರಣೆ ಸಂದರ್ಭದಲ್ಲಿ  ಈ ರೀತಿಯ ಹೇಳಿಕೆ ನೀಡಿದ ನ್ಯಾಯಾಧೀಶರು ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಘೋಷಿಸಿಕೊಂಡಿರುವಂತೆ  ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು. ಆದರೆ, ಅದು  ಜಾತ್ಯತೀತ ರಾಷ್ಟ್ರವಾಗಿರಬೇಕು ಎಂದು ಎಚ್ಚರಿಸಿದ್ದಾರೆ

ಬಾಂಗ್ಲಾದೇಶ, ಪಾಕಿಸ್ತಾನ, ಪಾಕಿಸ್ತಾನ, ಅಪ್ಘಾನಿಸ್ತಾನ ಸುತ್ತಮುತ್ತ  ವಾಸಿಸುತ್ತಿರುವ ಹಿಂದೂಗಳು, ಸಿಖ್ಖರು, ಜೈನರು, ಬೌದ್ದರು, ಪ್ಯಾರಿಸ್, ಕ್ರಿಶ್ಚಿಯನ್ ಮತ್ತಿತರರು  ಶಾಂತಿಯುತವಾಗಿ ಭಾರತದಲ್ಲಿ ವಾಸಿಸಲು ಅವಕಾಶ ಮಾಡಿಕೊಡುವ  ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.

ಈ ತೀರ್ಪು ತಪ್ಪಿನಿಂದ ಕೂಡಿದೆ. ಇದನ್ನು ಸ್ವೀಕರಿಸುವುದಿಲ್ಲ ಇಂತಹ ತೀರ್ಪು ನೀಡಬಾರದು ಎಂದು ಅಖಿಲ ಭಾರತ ಮಜ್ಲಿಸ್ ಇ - ಇತ್ತೇಹದುಲ್  ಮುಸ್ಲಿಮೀನ್ ಪಾರ್ಟಿ ಮುಖಂಡರೊಬ್ಬರು ಹೇಳಿದ್ದಾರೆ.

ಆದಾಗ್ಯೂ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೈಕೋರ್ಟ್ ನ್ಯಾಯಾಧೀಶರ ತೀರ್ಪನ್ನು ಸ್ವಾಗತಿಸಿದ್ದಾರೆ. ನ್ಯಾಯಾಧೀಶರ ಹೇಳಿಕೆ ದೇಶದ ಕೋಟ್ಯಾಂತರ ಜನರ ಧ್ವನಿಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com