ರಾಫೆಲ್ ತೀರ್ಪು ಅಘಾತಕಾರಿ, ಕೋರ್ಟ್ ವಾಸ್ತವಾಂಶವನ್ನು ಪರಿಶೀಲಿಸಿಯೇ ಇಲ್ಲ: ಸಿನ್ಹಾ, ಶೌರಿ, ಪ್ರಶಾಂತ್ ಭೂಷಣ್

ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕರಣಕ್ಕೆ ಬಿಜೆಪಿ ಮಾಜಿ ನಾಯಕರಾದ ಯಶ್ವಂತ್ ಸಿನ್ಹಾ, ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಹಾಗೂ ಪ್ರಶಾಂತ್ ಭೂಷಣ್ ಪ್ರತಿಕ್ರಿಯೆ ನೀಡಿದ್ದು
ರಾಫೆಲ್ ತೀರ್ಪು ಅಘಾತಕಾರಿ, ಕೋರ್ಟ್  ವಾಸ್ತವಾಂಶವನ್ನು ಪರಿಶೀಲಿಸಿಯೇ ಇಲ್ಲ: ಸಿನ್ಹಾ, ಶೌರಿ, ಪ್ರಶಾಂತ್ ಭೂಷಣ್
ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕರಣಕ್ಕೆ ಬಿಜೆಪಿ ಮಾಜಿ ನಾಯಕರಾದ ಯಶ್ವಂತ್ ಸಿನ್ಹಾ, ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಹಾಗೂ ಪ್ರಶಾಂತ್ ಭೂಷಣ್ ಪ್ರತಿಕ್ರಿಯೆ ನೀಡಿದ್ದು ಕೋರ್ಟ್ ತಾವು ಸಲ್ಲಿಸಿದ್ದ ದಾಖಲೆಗಳ ವಾಸ್ತವಾಂಶವನ್ನು ಪರಿಶೀಲಿಸಿಯೇ ಇಲ್ಲ. ಕೋರ್ಟ್ ತೀರ್ಪು ಅಘಾತಕಾರಿಯಾಗಿದೆ ಎಂದು ಹೇಳಿದ್ದಾರೆ. 
ಕೋರ್ಟ್ ತೀರ್ಪು ಅಘಾತಕಾರಿಯಾಗಿದೆ, ಕೋರ್ಟ್ ನಾವು ನೀಡಿದ ದಾಖಲೆಗಳನ್ನೂ ಪರಿಶೀಲನೆ ಮಾಡಿಲ್ಲ, ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕೆಂಬ ನಮ್ಮ ಮನವಿಯನ್ನೂ ಪರಿಗಣಿಸಿಲ್ಲ ಎಂದು ಅರುಣ್ ಶೌರಿ, ಯಶ್ವಂತ್ ಸಿನ್ಹಾ, ಪ್ರಶಾಂತ್ ಭೂಷಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಎಜಿ ಯಾವುದೇ ವರದಿಯನ್ನು ಸಲ್ಲಿಕೆ ಮಾಡಲಾಗಿಲ್ಲ, ಪರಿಶೀಲನೆಯನ್ನೂ ಮಾಡಲಾಗಿಲ್ಲ, ಕೋರ್ಟ್ ತೀರ್ಪು ಸಂಪೂರ್ಣವಾಗಿ ತಪ್ಪು ಮಾಹಿತಿಯನ್ನಾಧರಿಸಿದ್ದಾಗಿದೆ. ನಾವು ಸಲ್ಲಿಸಿದ್ದ ಅರ್ಜಿ ಸಂಪೂರ್ಣವಾಗಿ ದಾಖಲೆ ಸಹಿತ ವಾಸ್ತವಾಂಶಗಳನ್ನು ನೀಡಲಾಗಿತ್ತು.  ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಲಾಗಿರುವ ಅಂಶಗಳು ವಾಸ್ತವದಲ್ಲಿ ಇಲ್ಲವೇ ಇಲ್ಲ, ಜೊತೆಗೆ ಅದು ತಪ್ಪೂ ಕೂಡ ಆಗಿದೆ ಎಂದು ಸಿನ್ಹಾ, ಶೌರಿ, ಪ್ರಶಾಂತ್ ಭೂಷಣ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com