ಬಾಂಬ್ ಬೆದರಿಕೆ: ಮುಂಬೈ-ಲಖನೌ ಇಂಡಿಗೋ ವಿಮಾನ ತುರ್ತು ಭೂಸ್ಪರ್ಷ

ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಮುಂಬೈ-ಲಖನೌ ನಡುವೆ ಪ್ರಯಾಣಿಸಬೇಕಿದ್ದ ಇಂಡಿಗೋ ವಿಮಾನ ವೊಂದು ತುರ್ತು ಭೂಸ್ಪರ್ಷ ಮಾಡಿರುವ ಘಟನೆ ಶನಿವಾರ ನಡೆದಿದೆ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಮುಂಬೈ-ಲಖನೌ ನಡುವೆ ಪ್ರಯಾಣಿಸಬೇಕಿದ್ದ ಇಂಡಿಗೋ ವಿಮಾನ ವೊಂದು ತುರ್ತು ಭೂಸ್ಪರ್ಷ ಮಾಡಿರುವ ಘಟನೆ ಶನಿವಾರ ನಡೆದಿದೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.
ವಿಮಾನವು ಭೂಸ್ಪರ್ಷ ಮಾಡಿದ ಬಳಿಕ ಪ್ರತ್ಯೇಕವಾಗಿ ಇರಿಸಿದ್ದಲ್ಲದೆ ಬಾಂಬ್ ತಪಾಸಣೆ ಅಧಿಕಾರಿಗಳು ಸಮಗ್ರ ತಪಾಸಣೆಗೆ ಒಳಪಡಿಸಿದ್ದಾರೆ. ಆ ಬಳಿಕ ಯಾವುದೇ ಅಂತಹಾ "ಬಾಂಬ್" ಗಳು ಪತ್ತೆಯಾಗದ ಕಾರಣ ವಿಮಾನ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದರು.
ವಿಮಾನವು 6.05 ಕ್ಕೆ ಮುಂಬೈನಿಂದ ನಿರ್ಗಮಿಸಲು ತಯಾರಾಗಿತ್ತು.ಇಂಡಿಗೋ ಸಂಸ್ಥೆಯ ಗೋ ಏರ್ ಫ್ಲೈಟ್  G8 329 ವಿಮಾನವು ಬಾಂಬ್ ಬೆದರಿಕೆಗಳಿಂದ ತುರ್ತು ಭೂಸ್ಪರ್ಷ ಮಾಡಿದೆ. 
ವಿಮಾನದಲ್ಲಿದ್ದ ಓರ್ವ ಮಹಿಳೆಯ ಬಳಿ ಬಾಂಬ್ ಇರುವ ಬಗ್ಗೆ ಸಂದೇಹ ವ್ಯಕ್ತವಾಗಿತ್ತು.ಆಕೆಯ ಫೋಟೋ ತೊರಿಸಿ ಇವರು ದೇಶದ ಭದ್ರತೆಗೆ ಅಪಾಯ ಎನ್ನಲಾಗಿದ್ದ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಇದೀಗ ಆ ಮಹಿಳೆಯನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com