'ಯೆಸ್-ಮ್ಯಾನ್ ದಾಸ್' ಆರ್ ಬಿಐ ಗೌರ್ನರ್ ಹುದ್ದೆಯಲ್ಲಿ ಅಪಾಯಕಾರಿ: ಶಿವಸೇನೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡೆಗಳನ್ನು ಪ್ರತಿಪಕ್ಷಗಳಂತೆಯೇ ತೀಕ್ಷ್ಣವಾಗಿ ಟೀಕಿಸುವ ಎನ್ ಡಿಎ ಮಿತ್ರಪಕ್ಷ ಶಿವಸೇನೆ...
ಶಿವಸೇನೆ
ಶಿವಸೇನೆ
ಮುಂಬೈ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡೆಗಳನ್ನು ಪ್ರತಿಪಕ್ಷಗಳಂತೆಯೇ ತೀಕ್ಷ್ಣವಾಗಿ ಟೀಕಿಸುವ ಎನ್ ಡಿಎ ಮಿತ್ರಪಕ್ಷ ಶಿವಸೇನೆ, ಈಗ ಶಕ್ತಿಕಾಂತ್ ದಾಸ್ ಅವರನ್ನು ಆರ್ ಬಿಐ ಗೌರ್ನರ್ ಆಗಿ ನೇಮಕ ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿದೆ. 
ಶಕ್ತಿಕಾಂತ್ ದಾಸ್ ಆರ್ ಬಿಐ ಗೌರ್ನರ್ ಆಗಿ ಆರ್ಥಿಕ ಭಯೋತ್ಪಾದನೆ ಉಂಟಾಗುವಂತೆ ಮಾಡುವ ಸಾಧ್ಯತೆಗಳಿವೆ, ಬಿಜೆಪಿ ಸರ್ಕಾರ ಸತ್ಯವನ್ನು ಮಾತನಾಡುವವರನ್ನು ಇಷ್ಟಪಡುವುದಿಲ್ಲ. ಅವರು ಹೇಳಿದ್ದಕ್ಕೆ ತಲೆ ಅಲ್ಲಾಡಿಸುವವರು ಮಾತ್ರ ಬಿಜೆಪಿಗೆ ಬೇಕಾಗಿದ್ದಾರೆ. ಆರ್ ಬಿಐ ಗೌರ್ನರ್ ನ್ನಾಗಿ ಶಕ್ತಿಕಾಂತ್ ದಾಸ್ ಅವರ ನೇಮಕದಲ್ಲೂ ಇದೇ ಉದ್ದೇಶವಿದ್ದರೆ ಇದು ದೇಶದಲ್ಲಿ ಆರ್ಥಿಕ ಭಯೋತ್ಪಾದನೆಗೆ ಸಿಗುತ್ತಿರುವ ಸುಳಿವು ಎಂದು ಶಿವಸೇನೆ ಹೇಳಿದೆ. 
ಈ ಹಿಂದಿನ ಇಬ್ಬರು ಆರ್ ಬಿಐ ಗೌರ್ನರ್ ಗಳು ಅರ್ಥಶಾಸ್ತ್ರದ ಹಿನ್ನೆಲೆಯುಳ್ಳವರೇ ಆಗಿದ್ದರು. ಆದರೆ ಈಗ ಬಂದಿರುವವರು ಅರ್ಥಶಾಸ್ತ್ರದ ಬಗ್ಗೆ ಹೆಚ್ಚು ಅರಿವಿಲ್ಲದಿರುವ ಐಎಎಸ್ ಅಧಿಕಾರಿಯಷ್ಟೇ ಎಂದು ಅರ್ ಬಿಐ ಗೌರ್ನರ್ ಸ್ಥಾನಕ್ಕೇರಿರುವ ಶಿವಸೇನೆ ಶಕ್ತಿಕಾಂತ್ ದಾಸ್ ಅವರ ಹಿನ್ನೆಲೆಯನ್ನು ಪ್ರಶ್ನಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com