ಮಿಜೋರಾಂ ನೂತನ ಮುಖ್ಯಮಂತ್ರಿಯಾಗಿ ಜೊರಾಮ್ಥಂಗಾ ಪ್ರಮಾಣ

ಈಶಾನ್ಯ ರಾಜ್ಯ ಮಿಜೋರಾಂ​ನ ನೂತನ ಮುಖ್ಯಮಂತ್ರಿಯಾಗಿ ಮಿಜೋರಾಂ ನ್ಯಾಷನಲ್​ ಫ್ರಂಟ್(ಎಂಎನ್ಎಫ್) ಮುಖ್ಯಸ್ಥ
ಜೊರಾಮ್ಥಂಗಾ
ಜೊರಾಮ್ಥಂಗಾ
ಐಜ್ವಾಲ್: ಈಶಾನ್ಯ ರಾಜ್ಯ ಮಿಜೋರಾಂ​ನ ನೂತನ ಮುಖ್ಯಮಂತ್ರಿಯಾಗಿ ಮಿಜೋರಾಂ ನ್ಯಾಷನಲ್​ ಫ್ರಂಟ್(ಎಂಎನ್ಎಫ್) ಮುಖ್ಯಸ್ಥ ಜೊರಾಮ್ಥಂಗಾ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.
ಮಿಜೋರಾಂ ರಾಜಧಾನಿ ಐಜ್ವಾಲ್ ನಲ್ಲಿ ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ರಾಜಶೇಖರನ್ ಅವರು ಜೊರಾಮ್ಥಂಗಾ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಜೊರಾಮ್ಥಂಗಾ ಅವರು ಮೂರನೇ ಬಾರಿಗೆ ಮಿಜೋರಾಂನ ಮುಖ್ಯಮಂತ್ರಿಯಾಗಿದ್ದು, ಇದಕ್ಕೂ ಮೊದಲು 1998ರಿಂದ 2008ರ ವರೆಗೆ ಸತತ ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದರು.
ಡಿಸೆಂಬರ್ 11ರಂದು ಹೊರಬಿದ್ದಿದ್ದ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಮಿಜೋರಾಂ ನ್ಯಾಷನಲ್​ ಫ್ರಂಟ್​ ಆಡಳಿತಾರೂಢ ಕಾಂಗ್ರೆಸ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. 
40 ವಿಧಾನಸಭೆ ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳನ್ನು ಎಂಎನ್​ಎಫ್​ ತನ್ನದಾಗಿಸಿಕೊಂಡಿತ್ತು. ಆ ಮೂಲಕ ಹತ್ತು ವರ್ಷಗಳ ಕಾಂಗ್ರೆಸ್​ ಆಡಳಿತವನ್ನು ಎಂಎನ್​ಎಫ್​ ಕೊನೆಗೊಳಿಸಿತ್ತು. ಅಷ್ಟೇ ಅಲ್ಲ, ಮಿಜೋರಾಂ ಅನ್ನು ಸೋಲುವ ಮೂಲಕ ಈಶಾನ್ಯ ರಾಜ್ಯಗಳ ತನ್ನ ಕೊನೆ ನೆಲೆಯನ್ನೂ ಕಾಂಗ್ರೆಸ್​ ಕಳೆದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com