ಶಬರಿಮಲೆ ದೇವಾಲಯದಲ್ಲಿ ನಾಲ್ವರು ತೃತೀಯ ಲಿಂಗಿಗಳಿಂದ ಪೂಜೆ

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಭಾರಿ ಪೊಲೀಸ್ ಭದ್ರತೆಯಲ್ಲಿ ನಾಲ್ವರು ತೃತೀಯ ಲಿಂಗಿಗಳು ಪೂಜೆ ಸಲ್ಲಿಸಿದ್ದಾರೆ.
ತೃತೀಯ ಲಿಂಗಿಗಳು
ತೃತೀಯ ಲಿಂಗಿಗಳು
Updated on

ಕೇರಳ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಭಾರಿ ಪೊಲೀಸ್ ಭದ್ರತೆಯಲ್ಲಿ ನಾಲ್ವರು ತೃತೀಯ ಲಿಂಗಿಗಳು  ಪೂಜೆ ಸಲ್ಲಿಸಿದ್ದಾರೆ.

ಅನನ್ಯ, ತೃಪ್ತಿ, ರೆಂಜುಮೊಲ್ ಹಾಗೂ ಅವಂತಿಕ ಎಂಬ ತೃತೀಯ ಲಿಂಗಿಗಳು ಸಂಪ್ರದಾಯದಂತೆ ಕಪ್ಪು ಸೀರೆ ಧರಿಸಿ, ಇರುಮುಡಿ ಹೊತ್ತಿಕೊಂಡು ಬಂದಿದ್ದ ಇವರಿಗೆ ನಿಲಾಕ್ಕಲ್ ನಿಂದ ಪಂಪಾನದಿಯವರೆಗೂ ಪೊಲೀಸರು ಭದ್ರತೆ ನೀಡಿದ್ದಾರೆ. ನಂತರ ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ.

ದೇವಾಲಯದಲ್ಲಿ ಪೂಜೆ ಮಾಡುವ ಅವಕಾಶ ದೊರೆತ್ತಿರುವುದಕ್ಕೆ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಅವರ ಜೀವನದ ಉದ್ದೇಶವಾಗಿತ್ತು ಎಂಬುದು ತಿಳಿದುಬಂದಿದೆ.

ಈ ತೃತೀಯ ಲಿಂಗಿಗಳು ಕೇರಳ ಹೈಕೋರ್ಟ್ ನಿಯೋಜಿತ ಮೇಲುಸ್ತುವಾರಿ ಸಮಿತಿ ಸದಸ್ಯ, ಡಿಜಿಪಿ ಎ. ಹೇಮಚಂದ್ರನ್ ಹಾಗೂ ಐಜಿಪಿ ಮನೋಜ್ ಅಬ್ರಾಹಂ ಅವರನ್ನು ಸೋಮವಾರ ಭೇಟಿ ಮಾಡಿದ ನಂತರ  ದೇವಾಲಯಕ್ಕೆ ಬರಲು ಅವಕಾಶ  ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com