ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ಅಸ್ಸಾಂ ಬಿಜೆಪಿ ಸರ್ಕಾರ ನಿರ್ಧಾರ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರೈತರ ಸಾಲ ಮನ್ನಾ ಮಾಡುವುದಾಗಿ.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗುವಾಹತಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ ಬೆನ್ನಲ್ಲೇ, ಅಸ್ಸಾಂ ಬಿಜೆಪಿ ಸರ್ಕಾರ ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ನಿರ್ಧರಿಸಿದೆ.
ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರು ಬುಧವಾರ ರೈತರ ಕಲ್ಯಾಣಕ್ಕಾಗಿ ಅಸ್ಸಾಂ ರೈತರ ಸಬ್ಸಿಡಿ ಯೋಜನೆ, ಅಸ್ಸಾಂ ರೈತರ ಬಡ್ಡಿ ರಹಿತ ಯೋಜನೆ ಮತ್ತು ಅಸ್ಸಾಂ ರೈತರ ಪ್ರೋತ್ಸಾಹಧನ ಯೋಜನೆ ಎಂಬ ಮೂರು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.
ಅಸ್ಸಾಂ ರೈತರ ಬಡ್ಡಿ ರಹಿತ ಯೋಜನೆ ಅಡಿ ಮುಂದಿನ ಹಣಕಾಸು ವರ್ಷದಿಂದ ರೈತರಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. 2.62 ಲಕ್ಷ ರೈತರ ಕುಟುಂಬಗಳು ಈ ಯೋಜನೆ ಲಾಭ ಪಡೆಯಲಿದ್ದಾರೆ ಎಂದು ಅಸ್ಸಾಂ ಹಣಕಾಸು ಸಚಿವ ಹಿಮಂತ್ ಬಿಸ್ವಾ ಶರ್ಮಾ ಅವರು ತಿಳಿಸಿದ್ದಾರೆ.
ಇನ್ನು ರೈತರ ಪ್ರೋತ್ಸಾಹಧನ ಯೋಜನೆ ಅಡಿ ರೈತರ ಬ್ಯಾಂಕ್ ಗಳಿಂದ ಪಡೆಯುವ ಸಾಲದ ಮೊತ್ತದಲ್ಲಿ ಶೇ.25ರಷ್ಟು ಸಾಲವನ್ನು ಸರ್ಕಾರವೇ ತೀರಿಸಲಿದೆ. ಉದಾಹರಣೆಗೆ, ರೈತ 1 ಲಕ್ಷ ರುಪಾಯಿ ಸಾಲ ಪಡೆದರೆ, ಅದರಲ್ಲಿ 75 ಸಾವಿರ ರುಪಾಯಿ ಮರು  ಪಾವತಿಸಿದರೆ ಸಾಕು. ಉಳಿದ 25 ಸಾವಿರ ರುಪಾಯಿ ಸರ್ಕಾರ ಪ್ರೋತ್ಸಾಹಧನವಾಗಿ ನೀಡಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com